ಹೊಟೇಲ್ ರೂಫ್ ಗಾರ್ಡನ್‌ನಿಂದ ಬಿದ್ದು ಅನಿವಾಸಿ ಭಾರತೀಯ ಮೃತ್ಯು

Update: 2018-11-10 15:12 GMT

ಹೊಸದಿಲ್ಲಿ, ನ. 10: ದಿಲ್ಲಿಯ ಲುಟ್ಟೇನ್ಸ್‌ನಲ್ಲಿರುವ ತಾಜ್ ಮಾನ್‌ಸಿಂಗ್ ಹೊಟೇಲ್‌ನ ಟೆರೇಸ್‌ನಿಂದ ಆಕಸ್ಮಿಕವಾಗಿ ಬಿದ್ದು 48ರ ಹರೆಯದ ಅನಿವಾಸಿ ಭಾರತೀಯ ಉದ್ಯಮಿ ಮೃತಪಟ್ಟಿದ್ದಾರೆ. ಅಮೆರಿಕದ ಮೇರಿಲ್ಯಾಂಡ್‌ನ ನಿವಾಸಿ ನರೇಂದ್ರ ಎ. ಮಂಗಳಂ ಮದ್ಯಪಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳಲು ಟೆರೇಸ್ ಗಾರ್ಡನ್‌ಗೆ ತೆರಳಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 7ರಂದು ಬೆಳಗ್ಗೆ 2.30ರ ಹೊತ್ತಿಗೆ ಅವರು ಕೊಠಡಿ ಪ್ರವೇಶಿಸಿದ್ದರು. ನವೆಂಬರ್ 8ರಂದು ಕೊಠಡಿ ತೆರವುಗೊಳಿಸಲಿದ್ದರು. ಆದರೆ, ನವೆಂಬರ್ 7ರಂದು ಪೂರ್ವಾಹ್ನ 11.45ಕ್ಕೆ ಅವರ ಮೃತದೇಹ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಟೆರೇಸ್‌ನಲ್ಲಿರುವ ಗಾರ್ಡನ್‌ಗೆ ಯಾವುದೇ ತಡೆ ಬೇಲಿ ಇಲ್ಲ. ಇದಲ್ಲದೆ ಅಲ್ಲಿ ಸಾರಾಯಿ ಬಾಟಲಿಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ಮಂಗಳಂ ಅವರ ತಾಯಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಅವರು ದಿಲ್ಲಿಗೆ ಆಗಮಿಸಿದ್ದಾರೆ. ಅಮೆರಿಕದಲ್ಲಿರುವ ಕುಟುಂಬದ ಸದಸ್ಯರು ಕೂಡ ದಿಲ್ಲಿಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News