×
Ad

ರಜನೀಕಾಂತ್ ಸಿನೆಮಾ ‘2.0’ ಸೋರಿಕೆ ಮಾಡುತ್ತೇವೆ: ತಮಿಳ್ ರಾಕರ್ಸ್ ವೆಬ್‌ಸೈಟ್ ಬೆದರಿಕೆ

Update: 2018-11-10 22:07 IST

 ಹೊಸದಿಲ್ಲಿ, ನ.10: ಶೀಘ್ರವೇ ರಜನೀಕಾಂತ್ ಅಭಿನಯದ ‘2.0’ ಸಿನೆಮಾವನ್ನೂ ತಮ್ಮ ವೆಬ್‌ಸೈಟ್‌ನಲ್ಲಿ ಸೋರಿಕೆ ಮಾಡುವುದಾಗಿ ‘ತಮಿಳ್ ರಾಕರ್ಸ್’ ಎಂಬ ವೆಬ್‌ಸೈಟ್‌ನ ಹೆಸರಲ್ಲಿ ಮಾಡಿರುವ ಟ್ವೀಟ್ ಬೆದರಿಕೆಯೊಡ್ಡಿದೆ.

  ಆದರೆ ತನ್ನ ಹೆಸರಲ್ಲಿ ಟ್ವಿಟರ್ ಖಾತೆ ಇಲ್ಲ ಎಂದು ತಮಿಳ್ ರಾಕರ್ಸ್‌ನ ಮೂಲ ವೆಬ್‌ಸೈಟ್ ಸ್ಪಷ್ಟನೆ ನೀಡಿದೆ. ಬಳಿಕ ಟ್ವಿಟರ್ ಹ್ಯಾಂಡಲ್ ಅನ್ನು ಸ್ಥಗಿತಗೊಳಿಸಲಾಗಿದ್ದರೂ ಕೆಲವೇ ನಿಮಿಷಗಳಲ್ಲಿ ಕಿಡಿಗೇಡಿಗಳು ಹೊಸ ಟ್ವಿಟರ್ ಹ್ಯಾಂಡಲ್ ರೂಪಿಸಿದ್ದಾರೆ. ವಿಜಯ್ ಅಭಿನಯದ ‘ಸರ್ಕಾರ್’ ಹಾಗೂ ಅಮೀರ್‌ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನೆಮ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ತಮಿಳ್ ರಾಕರ್ಸ್ ವೆಬ್‌ಸೈಟ್‌ನಲ್ಲಿ ಸೋರಿಕೆಯಾಗಿತ್ತು. ಹೊಸದಾಗಿ ಬಿಡುಗಡೆಯಾಗುವ ಸಿನೆಮಗಳನ್ನು ಕದ್ದು ಸೋರಿಕೆ ಮಾಡುವ ವೆಬ್‌ಸೈಟ್‌ಗಳಿಂದ ಸಿನೆಮ ನಿರ್ಮಾಪಕರಿಗೆ ಸಮಸ್ಯೆ ಎದುರಾಗಿದೆ. ಇಂತಹ ವೆಬ್‌ಸೈಟ್‌ಗಳ ವಿರುದ್ಧ ಸೆಲೆಬ್ರಿಟಿಗಳು ಹಾಗೂ ಸಿನೆಮ ನಿರ್ಮಾಪಕರು ಧ್ವನಿ ಎತ್ತಿದ್ದು ಇವರಿಗೆ ಚಿತ್ರಮಂದಿರಗಳ ಮಾಲಕರೂ ಬೆಂಬಲ ನೀಡಿದ್ದಾರೆ.

ಇತ್ತೀಚೆಗೆ ಸಿನೆಮ ಮಂದಿರಗಳ ಒಳಗೆ ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ಸಿನೆಮಗಳನ್ನು ರೆಕಾರ್ಡ್ ಮಾಡಿಕೊಳ್ಳುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಸಿನೆಮಗಳನ್ನು ಕದಿಯುವ ಕೃತ್ಯದಲ್ಲಿ ಶಾಮೀಲಾಗಿರುವ ಕೆಲವು ಸಿನೆಮ ಮಂದಿರಗಳನ್ನು ‘ಕಪ್ಪು ಪಟ್ಟಿ’ಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News