ಉತ್ತರಾಖಂಡದಲ್ಲಿ ಲಘು ಭೂಕಂಪ

Update: 2018-11-11 17:53 GMT

ಡೆಹ್ರಾಡೂನ್, ನ. 11: ನೇಪಾಲದ ಗಡಿಯಲ್ಲಿರುವ ಉತ್ತರಾಖಂಡದ ಪಿತೋರ್‌ಗಢ್ ಜಿಲ್ಲೆಯಲ್ಲಿ ರವಿವಾರ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5 ತೀವ್ರತೆ ಹೊಂದಿದ್ದ ಭೂಕಂಪ ನೇಪಾಳದಲ್ಲಿ ಕೇಂದ್ರ ಹೊಂದಿತ್ತು. ಭೂಕಂಪನ ಎರಡೂ ದೇಶಗಳಲ್ಲಿ ಅನುಭವಕ್ಕೆ ಬಂದಿದೆ. ಆದರೆ, ಯಾವುದೇ ಸೊತ್ತು, ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಮೊದಲ ಭೂಕಂಪನ ಅಪರಾಹ್ನ 12.37ಕ್ಕೆ ಅನುಭವಕ್ಕೆ ಬಂತು. ಅದು ಐದು ನಿಮಿಷಗಳ ಕಾಲ ಇತ್ತು. ಇನ್ನೊಂದು ಭೂಕಂಪನ ಅಪರಾಹ್ನ 12.41ಕ್ಕೆ ಅನುಭವಕ್ಕೆ ಬಂತು ಎಂದು ಪಿತೋರ್‌ಗಢದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ. ರವಿ ಶಂಕರ್ ತಿಳಿಸಿದ್ದಾರೆ.

    ಜಿಲ್ಲೆಯಾದ್ಯಂತ ಭೂಕಂಪನ ಅನುಭವಕ್ಕೆ ಬಂದಿದೆ. ಆದರೆ, ಭೂಕಂಪ ಕೇಂದ್ರ ಹೊಂದಿರುವ ನೇಪಾಲಕ್ಕೆ ಹತ್ತಿರದಲ್ಲಿರುವ ಧಾರ್‌ಚುಲಾದಲ್ಲಿನ ಎಲ್ಲ ನಿವಾಸಿಗಳಿಗೆ ಭೂಕಂಪನ ಅನುಭವ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ.

ಘಟನೆ ನಡೆದ ಕೂಡಲೇ ಘಟನೆ ಪ್ರತಿಕ್ರಿಯೆ ವ್ಯವಸ್ಥೆಯನ್ನು ಸಕ್ರಿಯೆಗೊಳಿಸಲಾಯಿತು ಎಂದು ಅವರು ತಿಳಿಸಿದರು.

ಭೂಕಂಪ 10 ಕಿ. ಮೀ. ಆಳ ಹೊಂದಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News