ಅತ್ಯಾಚಾರ ಕಾನೂನಿನಲ್ಲಿ ಲಿಂಗ ತಟಸ್ಥತೆ ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂ ನಿರಾಕರಣೆ

Update: 2018-11-12 15:28 GMT

ಹೊಸದಿಲ್ಲಿ, ನ.12: ಐಪಿಸಿ ಸೆಕ್ಷನ್ 375ರ ಅನ್ವಯ ರೂಪುಗೊಂಡಿರುವ ಅತ್ಯಾಚಾರ ಕಾನೂನು ಲಿಂಗ ತಟಸ್ಥವಲ್ಲ, ಅದರ ತಿದ್ದುಪಡಿಯಾಗಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. 

ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 375 ತಿದ್ದುಪಡಿ ಕೋರಿ ‘ಕ್ರಿಮಿನಲ್ ಜಸ್ಟಿಸ್ ಸೊಸೈಟಿ ಆಫ್ ಇಂಡಿಯಾ’ ಎಂಬ ಎನ್‌ಜಿಒ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುವ ಕಾರಣ ನ್ಯಾಯಾಲಯ ಈ ಹಂತದಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ. ಪುರುಷನಿಂದ ಮಹಿಳೆಯ ಮೇಲೆ ಆಗುವ ಅತ್ಯಾಚಾರವನ್ನು ಮಾತ್ರ ಅಪರಾಧ ಎಂದು ಸೆಕ್ಷನ್ 375 ಪರಿಗಣಿಸುತ್ತದೆ. ಪುರುಷರನ್ನು ಅಥವಾ ಲಿಂಗ ಪರಿವರ್ತಿತರನ್ನು ಸಂತ್ರಸ್ತರು ಎಂದು ಇಲ್ಲಿ ಪರಿಗಣಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News