ಶಬರಿಮಲೆ ಪ್ರಕರಣ: ಟಿಡಿಬಿ ಪರ ವಾದಿಸದಿರಲು ವಕೀಲ ಸುಂದರಂ ನಿರ್ಧಾರ

Update: 2018-11-12 15:33 GMT

ತಿರುವನಂತಪುರಂ, ನ.12: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಶಬರಿಮಲೆ ತೀರ್ಪು ಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಟ್ರಾವಂಕೂರ್ ದೇವಸ್ವಂ ಬೋರ್ಡ್(ಟಿಡಿಬಿ) ಪ್ರತಿನಿಧಿ ವಕೀಲರಾಗಿದ್ದ ಸಿ.ಆರ್ಯಮ ಸುಂದರಂ, ಇದೀಗ ಪ್ರಕರಣದಲ್ಲಿ ಅರ್ಜಿದಾರನಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಸುಂದರಂ ಅವರ ಬದಲು ಶೇಖರ್ ನಫಡೆ ಟಿಡಿಬಿಯನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲಿದ್ದಾರೆ. ಸುಂದರಂ ಕಕ್ಷಿಗಾರನಾಗಿ ಸೇರ್ಪಡೆಗೊಳ್ಳುವ ಮೊದಲು ಫಿರ್ಯಾದಿದಾರರಲ್ಲಿ ಒಬ್ಬರಾದ ನಾಯರ್ ಸರ್ವಿಸ್ ಸೊಸೈಟಿ(ಎನ್‌ಎಸ್‌ಎಸ್)ನೊಂದಿಗೆ ಒಡನಾಟ ಹೊಂದಿದ್ದರು ಎನ್ನಲಾಗಿದೆ. ಕಾರ್ಪೊರೇಟ್ ವಕೀಲರಾಗಿರುವ ಸುಂದರಂ ಈ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಹಲವು ಪ್ರಕರಣಗಳಲ್ಲಿ ಪ್ರತಿನಿಧಿಸಿದ್ದರು. 1989ರಲ್ಲಿ ಅವರನ್ನು ಕೇಂದ್ರ ಸರಕಾರದ ಸ್ಥಾಯೀ ವಕೀಲರನ್ನಾಗಿ ನೇಮಿಸಲಾಗಿತ್ತು. 1995ರಲ್ಲಿ ಮದ್ರಾಸ್ ಹೈಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡಿದ್ದರು.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ನೀಡಿದ ಐತಿಹಾಸಿಕ ತೀರ್ಪು ಹೊರಬಿದ್ದ ಎಸ್.ರಂಗರಾಜನ್ ಪ್ರಕರಣದಲ್ಲಿ, ಅಂದಿನ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಎನ್.ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಗಾದಿಗೆ ಏರಲು ಅವಕಾಶ ಮಾಡಿಕೊಟ್ಟ ಪ್ರಕರಣದಲ್ಲಿ ಸುಂದರಂ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News