ನ್ಯುಮೋನಿಯಾದಿಂದ 2030ರಲ್ಲಿ ಭಾರತದಲ್ಲಿ 1.7 ದಶಲಕ್ಷ ಮಕ್ಕಳ ಸಾವು: ಅಧ್ಯಯನ ವರದಿ

Update: 2018-11-12 15:58 GMT

ಹೊಸದಿಲ್ಲಿ, ನ. 12: ನ್ಯೂಮೋನಿಯಾ ಸೋಂಕನ್ನು ಸುಲಭವಾಗಿ ಗುಣಪಡಿಸಲು ಸಾಧ್ಯವಿದ್ದರೂ 2030ರ ಹೊತ್ತಿಗೆ ನ್ಯೂಮೋನಿಯಾ ಸೋಂಕಿನಿಂದ 1.7 ದಶಲಕ್ಷಕ್ಕಿಂತಲೂ ಅಧಿಕ ಮಕ್ಕಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಜಾಗತಿಕ ಅಧ್ಯಯನವೊಂದು ಸೋಮವಾರ ಬಿಡುಗಡೆ ಮಾಡಿದ ವರದಿ ಎಚ್ಚರಿಸಿದೆ.

ಜಾಗತಿಕ ನ್ಯುಮೋನಿಯಾ ದಿನಾಚರಣೆ ಸಂದರ್ಭ ಬಿಡುಗಡೆ ಮಾಡಲಾದ ಅಧ್ಯಯನ ವರದಿಯಲ್ಲಿ ಈ ಸೋಂಕು ರೋಗದಿಂದ 2030ರ ಹೊತ್ತಿಗೆ 5 ವರ್ಷಕ್ಕಿಂತ ಕೆಳಗಿನ 11 ದಶಲಕ್ಷ ಮಕ್ಕಳು ಸಾವನ್ನಪ್ಪಲಿದ್ದಾರೆ ಎಂದು ಹೇಳಿದೆ. ನೈಜೀರಿಯಾ, ಭಾರತ, ಪಾಕಿಸ್ತಾನ ಹಾಗೂ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಅತ್ಯಧಿಕ ಮಕ್ಕಳು ಸಾವನ್ನಪ್ಪಲಿದ್ದಾರೆ ಎಂದು ಇಂಗ್ಲೆಂಡ್ ಮೂಲದ ಸಂಸ್ಥೆಯೊಂದರ ವರದಿ ಹೇಳಿದೆ. ಗುಣಮಟ್ಟದ ವ್ಯಾಕ್ಸಿನ್, ಚಿಕಿತ್ಸೆ ಹಾಗೂ ಪೋಷಕಾಂಶಗಳ ಸುಧಾರಣೆಯಿಂದ 4 ದಶಲಕ್ಷಕ್ಕಿಂತಲೂ ಹೆಚ್ಚು ಮಕ್ಕಳನ್ನು ಸುಲಭವಾಗಿ ಸಾವಿನಿಂದ ರಕ್ಷಿಸಬಹುದು ಎಂದು ಅದು ಹೇಳಿದೆ. ಜಗತ್ತಿನಲ್ಲಿ ನ್ಯುಮೋನಿಯಾ ಸೋಂಕು ಅತಿ ಹೆಚ್ಚು ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದು ಮಲೇರಿಯಾ, ಅತಿಸಾರ ಹಾಗೂ ದಡಾರದಿಂದ ಸಾಯುವ ಮಕ್ಕಳ ಒಟ್ಟು ಸಂಖ್ಯೆಗಿಂತ ಹೆಚ್ಚಿದೆ. ನ್ಯುಮೋನಿಯಾ ಸೋಂಕಿಗೆ 2016ರಲ್ಲಿ ಎರಡು ವರ್ಷಕ್ಕಿಂದ ಕಡಿಮೆ ವಯಸ್ಸಿನ 880,000ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ. ಇದು ಇತ್ತೀಚೆಗೆ ಲಭ್ಯವಿರುವ ಅಂಕಿ-ಅಂಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News