ಎಂ.ಜೆ. ಅಕ್ಬರ್ ಸಂಭಾವಿತ ವ್ಯಕ್ತಿ: ‘ಸಂಡೇ ಗಾರ್ಡಿಯನ್’ ಸಂಪಾದಕಿ ಸಾಕ್ಷ್ಯ

Update: 2018-11-12 15:50 GMT

ಹೊಸದಿಲ್ಲಿ, ನ. 12: ಪತ್ರಕರ್ತೆ ಪ್ರಿಯಾ ರಮಣಿ ಅವರು ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರ ಗೌರವ ಹಾಗೂ ಸದ್ಭಾವಕ್ಕೆ ಧಕ್ಕೆ ಉಂಟು ಮಾಡಲು ಉದ್ದೇಶ ಪೂರ್ವಕವಾಗಿ ‘ಮೀ ಟೂ’ ಆರೋಪಿಸಿ ಟ್ವೀಟ್ ಮಾಡಿದ್ದಾರೆ ಎಂದು ‘ಸಂಡೇ ಗಾರ್ಡಿಯನ್’ ಸಂಪಾದಕಿ ಜ್ಯೋತಿ ಬಸು ಹೇಳಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಎ.ಜೆ. ಅಕ್ಬರ್ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಪ್ರಥಮ ಸಾಕ್ಷಿಗಳಲ್ಲಿ ಬಸು ಕೂಡ ಒಬ್ಬರಾಗಿದ್ದಾರೆ. ಬಸು ಅವರು ಪಾಟಿಯಾಲ ಹೌಸ್ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ನ್ಯಾಯಾಧೀಶ ಸಮರ್ ವಿಶಾಲ್ ಮುಂದೆ ಸೋಮವಾರ ಹೇಳಿಕೆ ನೀಡಿದರು. ನಾನು ಅಕ್ಬರ್ ಅವರಿಗೆ ಯಾವಾಗಲೂ ಉನ್ನತ ಗೌರವ ನೀಡುತ್ತಿದ್ದೆ. ನನ್ನೊಂದಿಗೆ ಅವರು ವೃತ್ತಿಪರರಂತೆ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಕಠಿಣ ಪರಿಶ್ರಮಿ. ಸಂಪೂರ್ಣ ವೃತ್ತಿಪರ ಹಾಗೂ ಮೇಧಾವಿ ಬೋಧಕ ಎಂದು ಬಸು ಹೇಳಿದ್ದಾರೆ. ಅವರು ಮೇಧಾವಿ ಪತ್ರಕರ್ತ, ತಜ್ಞ ಲೇಖಕ ಹಾಗೂ ಸಂಪೂರ್ಣ ಸಂಭಾವಿತ ವ್ಯಕ್ತಿ ಎಂದು ನಾನು ಅವರನ್ನು ಪರಿಗಣಿಸಿದ್ದೆ ಎಂದು ಜ್ಯೋತಿ ಬಸು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News