ಕ್ಯಾನ್ಸರ್ ವಂಶವಾಹಿಗಳ ಸಂಶೋಧನೆ ಇನ್ನಷ್ಟು ವ್ಯಾಪಕಗೊಳ್ಳಬೇಕು: ವರ್ಮಸ್

Update: 2018-11-12 16:13 GMT

ಕಲ್ಯಾಣಿ(ಪ.ಬಂ.),ನ.12: ಕ್ಯಾನ್ಸರ್ ವಂಶವಾಹಿಗಳ ಕುರಿತು ಸಂಶೋಧನೆಯು ಈ ರೋಗದ ಬಗ್ಗೆ ಆಳವಾದ ಜ್ಞಾನವನ್ನು ಒದಗಿಸುವುದರಿಂದ ಮತ್ತು ಹಲವಾರು ಜೀವಗಳನ್ನು ಉಳಿಸಲು ನೆರವಾಗುವುದರಿಂದ ಅದು ಇನ್ನಷ್ಟು ವ್ಯಾಪಕಗೊಳ್ಳಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಹೆರಾಲ್ಡ್ ಇ ವರ್ಮಸ್ ಅವರು ಹೇಳಿದ್ದಾರೆ.

ರವಿವಾರ ಇಲ್ಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೊಮೆಡಿಕಲ್ ಜೆನೊಮಿಕ್ಸ್‌ನಲ್ಲಿ‘ಕ್ಯಾನ್ಸರ್ ಸಂಶೋಧನೆಯ ರೂಪಾಂತರಗಳು’ ಕುರಿತು ಉಪನ್ಯಾಸವನ್ನು ನೀಡಿದ ಅವರು,ವಿವಿಧ ಜನಾಂಗೀಯ ಮತ್ತು ಭೌಗೋಳಿಕ ಹಿನ್ನೆಲೆಗಳ ರೋಗಿಗಳಿಗಾಗಿ ವಂಶವಾಹಿ ಮಾಹಿತಿಗಳ ಸಂಗ್ರಹದ ಅಗತ್ಯಕ್ಕೆ ಒತ್ತು ನೀಡಿದರು. ಸದ್ಯಕ್ಕೆ ಕಾಕಷಿಯನ್ ಬಿಳಿಯ ರೋಗಿಗಳಿಗಾಗಿ ಸಾಕಷ್ಟು ದತ್ತಾಂಶ ಲಭ್ಯವಿದೆ. ಆದರೆ ಭಾರತ ಮತ್ತು ಆಫ್ರಿಕಾದಂತಹ ಪ್ರದೇಶಗಳಿಂದ ದತ್ತಾಂಶಗಳು ಯಾವುದೇ ವಿಳಂಬವಿಲ್ಲದೆ ದೊರೆಯುವ ಅಗತ್ಯವಿದೆ ಎಂದರು.

ಪ್ರೊ.ವರ್ಮಸ್ ಅವರು ಕಳೆದ 50 ವರ್ಷಗಳಿಂದಲೂ ಕ್ಯಾನ್ಸರ್ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು,1989ರಲ್ಲಿ ಜೆ.ಮೈಕೇಲ್ ಬಿಷಪ್ ಅವರೊಂದಿಗೆ ಔಷಧಿ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರವನ್ನು ಜಂಟಿಯಾಗಿ ಹಂಚಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News