×
Ad

ಛತ್ತೀಸ್‌ಗಢ ವಿಧಾನ ಸಭೆ ಚುನವಾಣೆ: ಶೇ. 70 ಮತದಾನ

Update: 2018-11-12 22:11 IST

ರಾಯ್‌ಪುರ, ನ. 12: ಛತ್ತೀಸ್‌ಗಡ ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ 8 ಜಿಲ್ಲೆಗಳಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಶೇ. 70 ಮತದಾನವಾಗಿದೆ. ಈ ನಡುವೆ ಬಿಜಾಪುರದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ ನಾಲ್ವರು ಮಾವೋವಾದಿಗಳು ಮೃತಪಟ್ಟಿದ್ದಾರೆ. ಛತ್ತೀಸ್‌ಗಢ ವಿಧಾನ ಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಶೇ. 70 ಮತದಾನವಾಗಿದೆ ಎಂದು ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ತಿಳಿಸಿದ್ದಾರೆ. ಖಯಿಜಿ ಕ್ಷೇತ್ರದಲ್ಲಿ ಅತ್ಯಧಿಕ ಶೇ. 72 ಮತದಾನವಾಗಿದೆ. ದಾಂತೇವಾಡದಲ್ಲಿ ಅತಿ ಕಡಿಮೆ ಶೇ. 49 ಮತದಾನವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News