ತಮಿಳುನಾಡಿನಲ್ಲೇಕೆ ಹಿಂದಿ ಹೆಸರುಗಳ ಯೋಜನೆಗಳು?: ಲೋಕಸಭಾ ಉಪ ಸ್ಪೀಕರ್ ತಂಬಿದುರೈ ಪ್ರಶ್ನೆ

Update: 2018-11-12 17:30 GMT

ಹೊಸದಿಲ್ಲಿ,ನ.12: ಕೇಂದ್ರವು ತಮಿಳುನಾಡಿನಂತಹ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಲೋಕಸಭಾ ಉಪ ಸ್ಪೀಕರ್ ಎಂ.ತಂಬಿದುರೈ ಅವರು,ತಮಿಳುನಾಡಿನಲ್ಲೇಕೆ ಯೋಜನೆಗಳಿಗೆ ಹಿಂದಿ ಹೆಸರುಗಳನ್ನಿಡಲಾಗುತ್ತದೆ? ಹಿಂದಿ ಭಾಷಿಕ ಪ್ರದೇಶಗಳಲ್ಲಾದರೆ ಇದು ಸರಿ. ಆದರೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾದಂತಹ ಹೆಸರುಗಳು ತಮಿಳು ನಾಡಿನವರಿಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

 ಸಂವಿಧಾನದ ಎಂಟನೇ ಪರಿಚ್ಛೇದವು ವಿವಿಧ ರಾಜ್ಯ ಸರಕಾರಗಳು ಅಧಿಕೃತ ಭಾಷೆಗಳನ್ನಾಗಿ ಬಳಸುತ್ತಿರುವ 22 ಭಾಷೆಗಳನ್ನೊಳಗೊಂಡಿದೆ. ಈ ಎಲ್ಲ ಭಾಷೆಗಳಿಗೂ ರಾಷ್ಟ್ರಮಟ್ಟದಲ್ಲಿ ಅಧಿಕೃತ ಭಾಷಾ ಸ್ಥಾನಮಾನ ನೀಡಬೇಕು ಎಂದು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರತಿಪಾದಿಸಿರುವ ಎಐಎಡಿಎಂಕೆ ಪ್ರಚಾರ ಕಾರ್ಯದರ್ಶಿಯೂ ಆಗಿರುವ ತಂಬಿದುರೈ, ಯುರೋಪ್‌ನಲ್ಲಿ ದೇಶದ ಕೇವಲ ಶೇ.2ರಷ್ಟು ಜನರು ಮಾತನಾಡುವ ಭಾಷೆಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಲಾಗಿದೆ. ನಮ್ಮ ದೇಶದಲ್ಲೇಕೆ ಅದು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News