ಫೈಝಾಬಾದ್ ಗೆ ಅಯೋಧ್ಯಾ ಮರುನಾಮಕರಣಕ್ಕೆ ಉ.ಪ್ರ. ಸಂಪುಟ ಅನುಮೋದನೆ

Update: 2018-11-13 15:04 GMT

ಹೊಸದಿಲ್ಲಿ, ನ. 13: ಅಲಹಾಬಾದ್ ಹಾಗೂ ಫೈಝಾಬಾದ್ ಡಿವಿಶನ್‌ಗೆ ಪ್ರಯಾಗ್‌ರಾಜ್ ಹಾಗೂ ಅಯೋಧ್ಯಾ ಡಿವಿಶನ್ ಎಂದು ಮರು ನಾಮಕರಣ ಮಾಡಲು ಉತ್ತರಪ್ರದೇಶ ಸರಕಾರ ಸೋಮವಾರ ಔಪಚಾರಿಕವಾಗಿ ಅನುಮೋದನೆ ನೀಡಿದೆ. ಅಲಹಾಬಾದ್ ಜಿಲ್ಲೆಗೆ ಕಳೆದ ತಿಂಗಳು ಪ್ರಯಾಗ್‌ರಾಜ್ ಎಂದು ಮರು ನಾಮಕರಣ ಮಾಡಲಾಗಿತ್ತು. ಫೈಝಾಬಾದ್ ಜಿಲ್ಲೆಗೆ ಅಯೋಧ್ಯಾ ಎಂದು ಮರು ನಾಮಕರಣ ಮಾಡಲಾಗುವುದು ಎಂದು ದೀಪಾವಳಿಯಂದು ಘೋಷಿಸಲಾಗಿತ್ತು. ‘‘ಹೌದು, ಅಲಹಬಾದ್ ಅಸ್ತಿತ್ವದಲ್ಲಿ ಇಲ್ಲ. ಅಲಹಬಾದ್ ಡಿವಿಶನ್‌ಗೆ ಪ್ರಯಾಗ್‌ರಾಜ್ ಡಿವಿಶನ್ ಎಂದು ಮರು ನಾಮಕರಣ ಮಾಡಲು ರಾಜ್ಯ ಸಂಪುಟದಿಂದ ಅನುಮೋದನೆ ಕೋರಲಿದ್ದೇವೆ’’ ಎಂದು ಉತ್ತರಪ್ರದೇಶದ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ‘‘ನಾವು ಅತ್ಯಗತ್ಯದ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜ್ಯ ಸಂಪುಟ ಸಭೆಯಲ್ಲಿ ಇದು ನಿರ್ಧಾರವಾಗಲಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News