ಇಟಲಿಯಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ವಿವಾಹ

Update: 2018-11-14 18:14 GMT

ಹೊಸದಿಲ್ಲಿ, ನ. 14: ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯಲ್ಲಿ ಬುಧವಾರ ವಿವಾಹವಾಗಿದ್ದಾರೆ. ಇಟಲಿಯ ಲೇಕ್ ಕೋಮೊ ರೆಸಾರ್ಟ್‌ನಲ್ಲಿ ಅವರಿಬ್ಬರು ಕೊಂಕಣಿ ಸಂಪ್ರದಾಯದಲ್ಲಿ ವಿವಾಹವಾಗಿದ್ದಾರೆ. ಗುರುವಾರ ನಡೆಯಲಿರುವ ಆನಂದ್ ಕರಜ್ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ರಾಮ್‌ಲೀಲಾ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಅವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿಂದ ಅವರ ನಡುವೆ ಬಾಂಧವ್ಯ ಬೆಳೆದಿತ್ತು. ವಿವಾಹ ಸಮಾರಂಭದಲ್ಲಿ ಕೇವಲ 40 ಜನರು ಮಾತ್ರ ಪಾಲ್ಗೊಂಡಿದ್ದರು. ದೀಪಿಕಾ ಪಡುಕೋಣಿ ಹಾಗೂ ರಣವೀರ್ ಸಿಂಗ್ ಬೆಂಗಳೂರು ಹಾಗೂ ಮುಂಬೈಯಲ್ಲಿ ಆರತಕ್ಷತೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News