ನೆಹರೂ ಕೃತಿಗಳ ಪ್ರಸಾರಕ್ಕೆ ವೆಬ್‌ಸೈಟ್ ಆರಂಭ

Update: 2018-11-15 15:31 GMT

ಹೊಸದಿಲ್ಲಿ, ನ.15: ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಯ್ದ ಕೃತಿಗಳನ್ನು ಹೊಂದಿರುವ ವೆಬ್‌ಸೈಟನ್ನು ನೆಹರೂ 129ನೇ ಜನ್ಮದಿನಾಚರಣೆ ಸಂದರ್ಭ ಜವಾಹರಲಾಲ್ ನೆಹರೂ ಮೆಮೋರಿಯಲ್ ಫಂಡ್(ಜೆಎನ್‌ಎಂಎಫ್) ಅನಾವರಣಗೊಳಿಸಿದೆ.

ನೆಹರೂ ಸಿಲೆಕ್ಟೆಡ್‌ವರ್ಕ್ಸ್ .com ಎಂಬ ಹೆಸರಿನ ಈ ವೆಬ್‌ಸೈಟ್‌ನ ಮೂಲಕ ನೆಹರೂರ ಕೃತಿಗಳನ್ನು ವ್ಯಾಪಕ ಓದುಗರಿಗೆ ತಲುಪಿಸುವ ಉದ್ದೇಶವಿದೆ.

ನೆಹರೂರವರ ಪ್ರಕಟಿತ ಕೃತಿಗಳ 76 ಸಂಪುಟಗಳನ್ನು ಜೆಎನ್‌ಎಂಎಫ್ ಈಗಾಗಲೇ ಡಿಜಿಟಲೀಕರಣಗೊಳಿಸಿದೆ. ನೆಹರೂ ಉಪನ್ಯಾಸಗಳು, ಭಾಷಣ ಹಾಗೂ ಲೇಖನಗಳನ್ನೂ ಈ ಸಂಪುಟ ಹೊಂದಿದ್ದು ಇವು ಪ್ರಕಟವಾದ ದಿನಾಂಕಕ್ಕೆ ಅನುಗುಣವಾಗಿ ವೆಬ್‌ಸೈಟ್‌ನಲ್ಲಿ ಸಂಯೋಜಿಸಲಾಗಿದೆ. ವಿದ್ವಾಂಸರು ಹಾಗೂ ಸಂಶೋಧಕರಿಗೆ ಸುಲಭವಾಗಿ ಮಾಹಿತಿಗಳನ್ನು ಪಡೆಯಲು ಡಿಜಿಟಲೀಕೃತ ಆವೃತ್ತಿ ನೆರವಾಗಲಿದೆ. ಮುಂದಿನ ಸುಮಾರು 6 ತಿಂಗಳಾವಧಿಯಲ್ಲಿ 10 ಸಂಪುಟಗಳನ್ನು ಪ್ರಕಟಿಸಲಾಗುವುದು ಎಂದು ಜೆಎನ್‌ಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News