ದಿಲ್ಲಿಯತ್ತ ತೆರಳುತ್ತಿರುವ 6 ಜೈಶ್ ಉಗ್ರರು: ಪಂಜಾಬ್ ನಾದ್ಯಂತ ಕಟ್ಟೆಚ್ಚರ

Update: 2018-11-15 17:25 GMT

ಪಂಜಾಬ್, ನ.15: ಆರು ಮಂದಿ ಜೈಶ್ ಉಗ್ರಗಾಮಿಗಳು ಪಂಜಾಬ್ ನೊಳಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಫಿರೋಝ್ಪುರದ ಅಂತಾರಾಷ್ಟ್ರೀಯ ಗಡಿಯಿಂದ ಆರು ಉಗ್ರರು ನುಸುಳಿದ್ದು, ದಿಲ್ಲಿ ತಲುಪಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

“ಪಂಜಾಬ್ ನಲ್ಲಿ 6 ಮಂದಿ ಭಯೋತ್ಪಾದಕರಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇವರು ಪಂಜಾಬ್ ನಿಂದ ದಿಲ್ಲಿಗೆ ಹೋಗಲು ಯೋಜನೆ ಹಾಕಿಕೊಂಡಿದ್ದಾರೆ” ಎಂದು ಗುಪ್ತಚರ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News