ಮಕ್ಕಳ ದಿನಾಚರಣೆಗೆ ಬೆಲೆ ಬರಲಿ

Update: 2018-11-16 18:30 GMT

ಮಾನ್ಯರೇ,

ನವೆಂಬರ್ 14 ರಂದು ಪ್ರತಿ ವರ್ಷವೂ ಹೆಸರಿಗೆ ಮಾತ್ರ ಮಕ್ಕಳ ದಿನಾಚರಣೆಯಾಗುತ್ತಿದೆ. ಮಕ್ಕಳ ಅಭಿವೃದ್ಧಿ ಬಗ್ಗೆ, ಸಾಮಾಜಿಕವಾಗಿ ಮಕ್ಕಳು ಎದುರಿಸಬೇಕಾದ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಯಾವ ಸರಕಾರವೂ (ಕೇಂದ್ರ ಹಾಗೂ ರಾಜ್ಯ) ಮಾಡುತ್ತಿಲ್ಲ.

ಶೈಕ್ಷಣಿಕವಾಗಿ ಕನ್ನಡ ಮಾಧ್ಯಮ, ಅಂಗ್ಲ ಮಾಧ್ಯಮ, ಹಿಂದಿ, ಸಿಬಿಎಸ್ಸಿ, ಐಸಿಎಸ್ಸಿ, ಸರಕಾರಿ ಶಾಲೆಗಳೆಂದು ಬೇರ್ಪಡಿಸಿ ಮಕ್ಕಳೊಳಗೆ ಅಸಮಾನತೆಯನ್ನು ಸೃಷ್ಟಿ ಮಾಡಲಾಗಿದೆ. ಈ ಸಮಸ್ಯೆಗೆ ಪರಿಹಾರವೇ ಇಲ್ಲ. ಅಲ್ಲದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿಯ ಪ್ರಕಾರ ಲಕ್ಷಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರ ಈ ದುಡಿಮೆಗೆ ಬಡತನವೇ ಕಾರಣವಾಗಿರುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಇಂತಹ ಮಕ್ಕಳಿಗೆ ವಿದ್ಯಾಭ್ಯಾಸ ಮರೀಚಿಕೆಯಾಗಿದೆ. ಮಕ್ಕಳಿಗೆ ಅವರ ಮೂಲಭೂತ ಹಕ್ಕುಗಳಾದ ಶಿಕ್ಷಣದ ಮೂಲಕ ದೇಶದ ಕಲೆ, ಸಂಸ್ಕೃತಿ, ಕ್ರೀಡೆ, ಸಾಹಿತ್ಯ, ಇತಿಹಾಸವಲ್ಲದೆ ಮಕ್ಕಳನ್ನು ಇತರರು ದಾರಿ ತಪ್ಪಿಸುವ ಬಗೆಗೆ ಅವರಲ್ಲಿ ಜಾಗೃತಿ ಮೂಡಿಸಿ ಮುಂದಿನ ಅವರ ಬದುಕಿನ ಬಗ್ಗೆ ಸರಿಯಾಗಿ ಮಾರ್ಗದರ್ಶನ ಮಾಡುವುದರ ಮೂಲಕ ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಬೇಕು. ಮಕ್ಕಳಿಗೆ ಅವರ ಬದುಕನ್ನು ಸರಿದಾರಿಯಲ್ಲಿ ನಡೆಸುವ ಗುಣಮಟ್ಟ ಶಿಕ್ಷಣವನ್ನು ನೀಡಿದಾಗ ಮಾತ್ರವೇ ಭಾರತದಲ್ಲಿ ‘ಮಕ್ಕಳ ದಿನಾಚರಣೆ’ಗೂ ಒಂದು ಅರ್ಥ ಬರುತ್ತದೆ.

Writer - -ಮಧುಕೇಶ್, ಗುಂಡ್ಲುಪೇಟೆ

contributor

Editor - -ಮಧುಕೇಶ್, ಗುಂಡ್ಲುಪೇಟೆ

contributor

Similar News