ಇಂಡೋನೇಶ್ಯದಲ್ಲಿ ಸರಣಿ ಭೂಕಂಪ: 7 ಸಾವು

Update: 2018-11-17 15:23 GMT

ಜಕಾರ್ತ, ನ. 17: ಇಂಡೋನೇಶ್ಯದ ಪಶ್ಚಿಮ ಸುಲವೆಸಿ ಪ್ರಾಂತದಲ್ಲಿ ಸರಣಿ ಭೂಕಂಪ ಮತ್ತು ಭೂಕುಸಿತಗಳು ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 8,000ಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಸ್ಥಳಾಂತರದ ವೇಳೆ ಸಾವುಗಳು ಸಂಭವಿಸಿವೆ ಎಂದು ವಿಪತ್ತು ನಿರ್ವಹಣೆ ಸಂಸ್ಥೆಯ ಪುನರ್ವಸತಿ ಮತ್ತು ಪುನರ್ನಿರ್ಮಾಣ ಘಟಕದ ಮುಖ್ಯಸ್ಥ ತಿಳಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭೂಕುಸಿತದಲ್ಲಿ ಕನಿಷ್ಠ 8 ಮನೆಗಳು ಸಮಾಧಿಯಾಗಿವೆ.

8,000ಕ್ಕೂ ಅಧಿಕ ಮಂದಿ ಮನೆಗಳನ್ನು ತೊರೆದಿದ್ದು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಕಳೆದ 5 ದಿನಗಳಿಂದ ಕಡಿಮೆ ತೀವ್ರತೆಯ ಸರಣಿ ಭೂಕಂಪಗಳು ಸಂಭವಿಸುತ್ತಿವೆ.

ಪಶ್ಚಿಮ ಸುಲವೆಸಿ ಪ್ರಾಂತಕ್ಕೆ ಹೊಂದಿಕೊಂಡಿರುವ ಮಧ್ಯ ಸುಲವೆಸಿ ರಾಜ್ಯದಲ್ಲಿ ಸೆಪ್ಟಂಬರ್ ಕೊನೆಯಲ್ಲಿ ಸಂಭವಿಸಿದ ಭೂಕಂಪ ಮತ್ತು ಬಳಿಕ ಅಪ್ಪಳಿಸಿದ ಸುನಾಮಿಯಲ್ಲಿ 2,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News