×
Ad

ಕೆನಡಾ ಪ್ರಧಾನಿ ಪಾಲ್ಗೊಂಡಿದ್ದ ಸಭೆಯಲ್ಲಿ ಖಾಲಿಸ್ತಾನ್ ಪರ ಘೋಷಣೆ

Update: 2024-04-29 21:22 IST

PC : ANI (ಜಸ್ಟಿನ್ ಟ್ರೂಡೊ)

ಟೊರಂಟೊ: ಕೆನಡಾದ ಟೊರಂಟೊದಲ್ಲಿ ಪ್ರಧಾನಿ ಜಸ್ಟಿನ್ ಟ್ರೂಡೊ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಖಾಲಿಸ್ತಾನ್ ಪರ ಘೋಷಣೆ ಕೂಗಿದ ಘಟನೆ ನಡೆದಿದೆ.

ರವಿವಾರ ನಡೆದ ಖಾಲ್ಸಾ ದಿನಾಚರಣೆ(ಸಿಖ್ಖರ ಹೊಸ ವರ್ಷ ದಿನಾಚರಣೆ)ಯಲ್ಲಿ ಮಾತನಾಡಿದ ಟ್ರೂಡೊ `ಸಿಖ್ ಸಮುದಾಯದವರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಕೆನಡಾ ಸರಕಾರ ಬದ್ಧ' ಎಂದರು. ಕನ್ಸರ್ವೇಟಿವ್ ಮುಖಂಡ ಪಿಯರೆ ಪೊಲಿವೆರ್, ನ್ಯೂ ಡೆಮೊಕ್ರಟಿನ್ ಪಾರ್ಟಿ(ಎನ್‍ಡಿಪಿ) ಮುಖಂಡ ಜಗ್ಮೀತ್ ಸಿಂಗ್, ಟೊರಂಟೊದ ಮೇಯರ್ ಒಲಿವಿಯಾ ಚೋವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಟ್ರೂಡೊ ಮಾತನಾಡುತ್ತಿರುವಾಗ ಸಭೆಯಲ್ಲಿ ಖಾಲಿಸ್ತಾನ್ ಪರ ಘೋಷಣೆ ಮೊಳಗಿದೆ. ` ಕೆನಡಾದ ದೊಡ್ಡ ಸಾಮರ್ಥ್ಯವೆಂದರೆ ಅದರ ವೈವಿಧ್ಯತೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಬಲಿಷ್ಟವಾಗಿದ್ದೇವೆ. ಆದರೆ ಈ ಭಿನ್ನಾಭಿಪ್ರಾಯಗಳನ್ನು ಗಮನಿಸಿದಾಗ ಸಿಖ್ ಸಮುದಾಯದವರ ಮೌಲ್ಯ ಮತ್ತು ನಂಬಿಕೆಗಳು ಹಾಗೂ ಕೆನಡಿಯನ್ನರ ಮೌಲ್ಯ ಮತ್ತು ನಂಬಿಕೆಗಳಲ್ಲಿ ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ದೇಶದಲ್ಲಿರುವ ಸುಮಾರು 8 ಲಕ್ಷ ಸಿಖ್- ಕೆನಡಿಯನ್ನರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ನಾವು ಬದ್ಧವಾಗಿದ್ದೇವೆ. ದ್ವೇಷ ಮತ್ತು ಪಕ್ಷಪಾತದ ಕ್ರಮಗಳಿಂದ ಸಿಖ್ ಸಮುದಾಯವನ್ನು ರಕ್ಷಿಸಲು ಸರಕಾರ ಬದ್ಧವಾಗಿದೆ. ಗುರುದ್ವಾರ ಸೇರಿದಂತೆ ಸಿಖ್ಖರ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಸರಕಾರ ಬಿಗಿಗೊಳಿಸಿದೆ' ಎಂದು ಟ್ರೂಡೊ ಹೇಳಿದ್ದಾರೆ.

ನಿಮ್ಮ ಧಾರ್ಮಿಕ ನಂಬಿಕೆಗಳನ್ನು, ಆಚರಣೆಗಳನ್ನು ಮುಕ್ತವಾಗಿ ಆಚರಿಸುವುದು ಮೂಲಭೂತ ಹಕ್ಕಿಗೆ ಸಮವಾಗಿದೆ ಮತ್ತು ಇದನ್ನು ಕೆನಡಾದ `ಹಕ್ಕಗಳು ಮತ್ತು ಸ್ವಾತಂತ್ರ್ಯ'ದ ಸನದು(ಚಾರ್ಟರ್) ಖಚಿತಪಡಿಸಿದೆ. ನಾವು ನಿಮ್ಮ ಜತೆಗಿದ್ದೇವೆ ಮತ್ತು ಜತೆಗೆ ನಿಲ್ಲಲಿದ್ದೇವೆ' ಎಂದು ಟ್ರೂಡೊ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News