×
Ad

ಪಾಕಿಸ್ತಾನ | ಅಪಹೃತ ನ್ಯಾಯಾಧೀಶರ ಬಿಡುಗಡೆ

Update: 2024-04-29 21:14 IST

ಸಾಂದರ್ಭಿಕ ಚಿತ್ರ | PC : NDTV

ಲಾಹೋರ್: ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಸಶಸ್ತ್ರ ವ್ಯಕ್ತಿಗಳಿಂದ ಅಪಹರಿಸಲ್ಪಟ್ಟಿದ್ದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಸೋಮವಾರ ಬಿಡುಗಡೆಗೊಳಿಸಿರುವುದಾಗಿ ಖೈಬರ್ ಪಖ್ತೂಂಕ್ವಾ ಪ್ರಾಂತೀಯ ಸರಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನದ ಗಡಿಭಾಗದ ಟ್ಯಾಂಕ್ ಆ್ಯಂಡ್ ಡೆರಾ ಇಸ್ಮಾಯಿಲ್ ಖಾನ್ ಜಿಲ್ಲೆಯಿಂದ ಎಪ್ರಿಲ್ 27ರಂದು ನ್ಯಾಯಾಧೀಶರನ್ನು ಅಪಹರಿಸಲಾಗಿತ್ತು. ಅವರ ಕಾರು ಮತ್ತು ಕಾರಿನ ಚಾಲಕನನ್ನು ಅಪಹರಣ ಕೃತ್ಯ ನಡೆದ ಸ್ಥಳದಲ್ಲೇ ಪತ್ತೆ ಮಾಡಲಾಗಿತ್ತು. ಸೋಮವಾರ ನ್ಯಾಯಾಧೀಶರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಲಾಗಿದ್ದು ಅವರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ. ನ್ಯಾಯಾಧೀಶರ ಅಪಹರಣ ಕೃತ್ಯದ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News