#ಮೀಟೂ ಒಂದು ಫ್ಯಾಶನ್ ಆಗಿಬಿಟ್ಟಿದೆ ಎಂದ ಮೋಹನ್‍ಲಾಲ್

Update: 2018-11-20 15:29 GMT

ತಿರುವನಂತಪುರಂ, ನ.20: ದೇಶದಲ್ಲಿ ಬಹಳಷ್ಟು ಸುದ್ದಿ ಮಾಡಿರುವ #ಮೀಟೂ ಆಂದೋಲನ ಕೇವಲ "ಫ್ಯಾಶನ್'' ಆಗಿ ಬಿಟ್ಟಿದೆ, ಅದು ದೀರ್ಘ ಕಾಲ ಬಾಳದು ಎಂದು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೇಳಿದ್ದಾರೆ.

“ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಸಮಸ್ಯೆಯೇನೂ ಇಲ್ಲ. #ಮೀಟೂ ಅನ್ನು ನೀವು ಆಂದೋಲನವೆಂದು ತಿಳಿಯುವುದೂ ಅಗತ್ಯವಿಲ್ಲ, ಅದು ಒಂದು ವಿಧದ ಫ್ಯಾಶನ್ ಆಗುತ್ತಿದೆ, ಇಂತಹ ವಿಚಾರಗಳು ಅಲ್ಪ ಕಾಲ ಬಾಳಿಕೆ ಬರುವುದು'' ಎಂದು ಮೋಹನ್‍ಲಾಲ್ ಅಭಿಪ್ರಾಯ ಪಟ್ಟಿದ್ದಾರೆ.

ತಮ್ಮ ಚಾರಿಟಿ  ನಿಧಿ ಸಂಗ್ರಹ ಕಾರ್ಯಕ್ರಮ ‘ಒನ್ನಾಣು ನಮ್ಮಳ್’ ಉದ್ಘಾಟನಾ ಸಮಾರಂಭಕ್ಕಾಗಿ ಸಂಯುಕ್ತ ಅರಬ್ ರಾಷ್ಟ್ರದಲ್ಲಿರುವ ಮೋಹನ್‍ ಲಾಲ್ ಸುದ್ದಿಗಾರರ ಜತೆ ಮಾತನಾಡುತ್ತಾ ಮೇಲಿನಂತೆ ಹೇಳಿದ್ದಾರೆ. ‘ಒನ್ನಾಣು ನಮ್ಮಳ್’ ಡಿಸೆಂಬರ್ 7ರಂದು ಆರಂಭಗೊಳ್ಳಲಿದೆ. ತಮಗೆ ಮೀಟೂ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ ಎಂದೂ ಮೋಹನ್ ಲಾಲ್ ಹೇಳಿಕೊಂಡರು.

ಪುರುಷರಿಗೂ ಅವರದ್ದೇ ಆದ #ಮೀಟೂ ಕಥೆಗಳಿರಬಹುದು, ಎಂದು ಹೇಳಿದ ಹಿರಿಯ ನಟ, ಕಿರುಕುಳ ಅನುಭವಿಸಿದವರು ಮಾತ್ರ ಈ ಬಗ್ಗೆ ಮಾತನಾಡುವುದು ಸೂಕ್ತ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News