ಅಫ್ಘಾನಿಸ್ತಾನದ ಶಾಹ್‌ಝಾದ್ 12 ಎಸೆತಗಳಲ್ಲಿ ಅರ್ಧಶತಕ

Update: 2018-11-22 08:06 GMT

ದುಬೈ, ನ.22: ಅಫ್ಘಾನಿಸ್ತಾನದ ದಾಂಡಿಗ ಮುಹಮ್ಮದ ಶಾಹ್‌ಝಾದ್ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಟಿ 10 ಲೀಗ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

  ಸಿಂಧಿಸ್ ಮತ್ತು ರಜಪೂತ್ಸ್ ತಂಡಗಳ ನಡುವೆ ಬುಧವಾರ ನಡೆದ 10 ಓವರ್‌ಗಳ ಕ್ರಿಕೆಟ್‌ನಲ್ಲಿ ರಜಪೂತ್ಸ್ ತಂಡದ ಶಾಹ್‌ಝಾಧ್ ದಾಖಲೆ ಬರೆದಿದ್ದಾರೆ. ಅವರು 16 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ 74 ರನ್ ಗಳಿಸಿದರು.

ಸಿಂಧಿಸ್ ವಿರುದ್ಧ ಗೆಲುವಿಗೆ 95 ರನ್‌ಗಳ ಸವಾಲನ್ನು ಪಡೆದ ರಜಪೂತ್ಸ್ ತಂಡ ದ ಆರಂಭಿಕ ದಾಂಡಿಗರಾದ ಶಾಹ್‌ಝಾದ್ ಮತ್ತು ಬ್ರೆಂಡನ್ ಮೆಕಲಮ್  ಕೇವಲ 17 ನಿಮಿಷಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಮೆಕಲಮ್ 24 ಎಸೆತಗಳಲ್ಲಿ (4 ಓವರ್‌ಗಳಲ್ಲಿ) ವಿಕೆಟ್ ನಷ್ಟವಿಲ್ಲದೆ 96 ರನ್ ಗಳಿಸಿದರು. ರಜಪೂತ್ಸ್ 10 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.

ಇದಕ್ಕೂ ಮೊದಲು ಸಿಂಧಿಸ್ ತಂಡ ನಾಯಕ ಶೇನ್ ವಾಟ್ಸನ್ 20 ಎಸೆತಗಳಲ್ಲಿ ದಾಖಲಿಸಿದ 42 ರನ್‌ಗಳ ಸಹಾಯದಿಂದ 6 ವಿಕೆಟ್ ನಷ್ಟದಲ್ಲಿ 94 ರನ್ ಗಳಿಸಿತ್ತು.

ಮೆಕಲಮ್ 8 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 21 ರನ್ ಸೇರಿಸಿದರು. ರಜಪೂತ್ಸ್ ತಂಡದ 30ರ ಹರೆಯದ ಶಾಹ್‌ಝಾದ್ ಅವರು ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ತಂಡದ ನಾಯಕ ಇಯಾನ್ ಮೊರ್ಗನ್ ದಾಖಲೆಯನ್ನು ಮುರಿದರು. ಮೊರ್ಗನ್ ಟಿ 10 ಕ್ರಿಕೆಟ್‌ನಲ್ಲಿ 14 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News