×
Ad

ಎಂಸಿಎಂಗೆ ಡೀಲ್ಡ್ ವಿವಿ ಸ್ಥಾನಮಾನ ಸನ್ನಿಹಿತ

Update: 2018-11-22 21:57 IST

ಹೊಸದಿಲ್ಲಿ,ನ.22: ಭಾರತೀಯ ಸಮೂಹ ಸಂವಹನ ಸಂಸ್ಥೆಗೆ ಪರಿಗಣಿತ ವಿವಿ ಸ್ಥಾನಮಾನ (ಡೀಮ್ಡ್ ಯೂನಿವರ್ಸಿಟಿ)ವನ್ನು ನೀಡುವ ಕುರಿತ ಆಶಯಪತ್ರ (ಲೆಟರ್ ಆಫ್ ಇಂಟೆಂಟ್)ವನ್ನು ಕೇಂದ್ರ ಮಾನವಸಂಪನ್ಮೂಲಾಭಿವೃದ್ಧಿ ಸಚಿವಾಲಯವು ಗುರುವಾರ ಪ್ರಕಟಿಸಿದೆ.

ಡೀಮ್ಡ್ ವಿವಿ ಸ್ಥಾನಮಾನದಿಂದಾಗಿ ಸಂಸ್ಥೆಗೆ, ಡಿಪ್ಲೊಮಾಗಳ ಬದಲಿಗೆ ಪದವಿ ಶಿಕ್ಷಣವನ್ನು ನೀಡಲು ಸಾಧ್ಯವಾಗಲಿದೆ.

ಐಐಎಂಸಿಗೆ ಡೀಮ್ಡ್ ವಿವಿ ಸ್ಥಾನಮಾನ ನೀಡುವಂತೆ, ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಕಳೆದ ಆಗಸ್ಟ್‌ನಲ್ಲಿ ಮಾನವಸಂಪನ್ಮೂಲಾಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.

ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಭಾರತದ ಪ್ರತಿಷ್ಠಿತ ಪತ್ರಿಕೋದ್ಯಮ ಶಿಕ್ಷಣಸಂಸ್ಥೆಗಳಲ್ಲೊಂದಾಗಿದೆ. ಪ್ರಸ್ತುತ ಅದು ಪತ್ರಿಕೋದ್ಯಮ, ಜಾಹೀರಾತು ಹಾಗೂ ಸಾರ್ವಜನಿಕ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಗಳನ್ನು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News