ಇಂಡೋನೇಷಿಯಾ ವಿಮಾನ ಪತನ: ಭಾರತ ಮೂಲದ ಪೈಲಟ್ ಮೃತದೇಹದ ಗುರುತು ಪತ್ತೆ
Update: 2018-11-25 15:41 IST
ಹೊಸದಿಲ್ಲಿ, ನ.25: ಇತ್ತೀಚೆಗಷ್ಟೇ ಪತನವಾದ ಇಂಡೋನೇಷಿಯಾದ ವಿಮಾನದ ಪೈಲಟ್ ಆಗಿದ್ದ ಭಾರತೀಯ ಭವ್ಯೆ ಸುನೇಜಾ ಅವರ ಮೃತದೇಹವನ್ನು ಗುರುತಿಸಿರುವುದಾಗಿ ಇಂಡೋನೇಷಿಯನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಕ್ಯಾ.ಭವ್ಯೆ ಸುನೇಜಾರ ಮೃತದೇಹವನ್ನು ಗುರುತಿಸಿರುವುದಾಗಿ ಇಂಡೋನೇಷಿಯಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಂದು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು’ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇಂಡೋನೇಷಿಯಾದ ದ್ವೀಪ ಜಾವಾ ಸಮೀಪ ಸಮುದ್ರಕ್ಕೆ ಇಂಡೋನೇಷಿಯಾದ ಲಯನ್ ಏರ್ ವಿಮಾನ ಪತನಗೊಂಡಿತ್ತು. ವಿಮಾನದಲ್ಲಿ 188 ಪ್ರಯಾಣಿಕರಿದ್ದರು.