×
Ad

ಇಂದಿಗೂ ಮೋದಿಯ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ: ಕಾಂಗ್ರೆಸ್ ನಾಯಕ ವಿಲಾಸ್ ರಾವ್ ವಿವಾದಾತ್ಮಕ ಹೇಳಿಕೆ

Update: 2018-11-25 16:02 IST

ಹೊಸದಿಲ್ಲಿ, ನ.25: ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಪ್ರಧಾನಿ ಮೋದಿಯವರ ತಾಯಿಯ ವಯಸ್ಸಿಗೆ ಹೋಲಿಸಿ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ವಿವಾದಾತ್ಮಕ ಹೇಳಿಕೆ ನೀಡಿರುವ ನಡುವೆಯೇ, ಮತ್ತೋರ್ವ ಕಾಂಗ್ರೆಸ್ ನಾಯಕ ಮೋದಿಯವರ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಾತನಾಡುವ ಮಾಜಿ ಕೇಂದ್ರ ಸಚಿವ ವಿಲಾಸ್ ರಾವ್ ಮುತ್ತೇಮ್ವರ್, “ಪ್ರಧಾನಿಯಾಗುವುದಕ್ಕೆ ಮೊದಲು ಮೋದಿಯ ಹೆಸರು ಯಾರಿಗೆ ಗೊತ್ತಿತ್ತು?, ಇಂದು ಕೂಡ ನಿಮ್ಮ (ಮೋದಿ) ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ. ಎಲ್ಲರಿಗೂ ರಾಹುಲ್ ತಂದೆಯ ಹೆಸರು ಗೊತ್ತಿದೆ” ಎಂದು ಹೇಳಿರುವುದು ಕೇಳಿಸುತ್ತದೆ.

ವಿಲಾಸ್ ರಾವ್ ರ ಈ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ, ನಾಚಿಕೆಯಿಲ್ಲದ ಹೇಳಿಕೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News