‘ಗಜ’ ಚಂಡಮಾರುತಕ್ಕೆ ತತ್ತರಿಸಿದ ಗ್ರಾಮ: ನಟ ವಿಶಾಲ್ ನಡೆಗೆ ವ್ಯಾಪಕ ಮೆಚ್ಚುಗೆ

Update: 2018-11-26 15:58 GMT

ಚೆನ್ನೈ, ನ.26: ತಮಿಳುನಾಡು ಚಿತ್ರ ನಿರ್ಮಾಪಕರ ಮಂಡಳಿಯ ಅಧ್ಯಕ್ಷ ಹಾಗೂ ನಡಿಗರ್ ಸಂಘಂ ಕಾರ್ಯದರ್ಶಿಯಾಗಿರುವ ನಟ ವಿಶಾಲ್ ಅವರು ತಂಜಾವೂರು ಸಮೀಪದ ಕರಗವಯಲ್ ಎಂಬ ಸಂಪೂರ್ಣ ಗ್ರಾಮವನ್ನು ದತ್ತು  ಪಡೆದುಕೊಂಡಿದ್ದಾರೆ. ಚಂಡಮಾರುತ ‘ಗಜ’ದಿಂದ ತತ್ತರಿಸಿ ಹೋಗಿರುವ ಈ ಗ್ರಾಮದ ಜನರ ಪಾಲಿಗೆ ಅವರು ಆಶಾಕಿರಣವಾಗಿದ್ದಾರೆ. ಗಜ ಚಂಡಮಾರುತದಿಂದಾಗಿ ತೀವ್ರ ಬಾಧಿತ ಗ್ರಾಮಗಳಲ್ಲಿ ಕರಗವಯಲ್ ಗ್ರಾಮ ಕೂಡಸೇರಿದೆ.

ಗ್ರಾಮವನ್ನು ಮತ್ತೆ ಹಿಂದಿನಂತೆ ಮಾಡುವುದಾಗಿ ವಿಶಾಲ್ ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ್ದಾರೆ. ತಾನು ಗ್ರಾಮವನ್ನು ದತ್ತು ತೆಗೆದುಕೊಂಡಿರುವ ಬಗ್ಗೆ ಟ್ವೀಟ್ ಮೂಲಕ ಹೇಳಿಕೊಂಡಿರುವ ವಿಶಾಲ್, ``ತಂಜಾವೂರು ಜಿಲ್ಲೆಯ ಕರಗವಯಲ್ ಗ್ರಾಮ ನನ್ನದು. ಅದನ್ನು ಮತ್ತೆ ಸಹಜ ಸ್ಥಿತಿಗೆ ತರುತ್ತೇನೆಂದು ಭರವಸೆ ನೀಡುತ್ತೇನೆ. ಇದು ಸದಾ ನನ್ನ ಜವಾಬ್ದಾರಿ,''ಎಂದು ಬರೆದಿದ್ದಾರೆ.

ಚಂಡಮಾರುತ ಗಜ ತಮಿಳುನಾಡಿನಲ್ಲಿ 45 ಮಂದಿಯನ್ನು ಬಲಿ ಪಡೆದುಕೊಂಡಿದೆಯಲ್ಲದೆ ಅಪಾರ ಬೆಳೆ ನಾಶಕ್ಕೆ ಕೂಡ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News