‘ಥಗ್ಸ್ ಆಫ್ ಹಿಂದೋಸ್ತಾನ್’ ಸೋಲಿನ ಬಗ್ಗೆ ಆಮಿರ್ ಖಾನ್ ಪ್ರತಿಕ್ರಿಯಿಸಿದ್ದು ಹೀಗೆ

Update: 2018-11-26 16:37 GMT

ಹೊಸದಿಲ್ಲಿ, ನ.26: ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಸೃಷ್ಟಿಸಿದ್ದರೂ, ಬಾಕ್ಸ್ ಆಫೀಸ್ ನಲ್ಲಿ ಸೋಲುಂಡ ತನ್ನ ಹೊಸ ಚಿತ್ರ ‘ಥಗ್ಸ್ ಆಫ್ ಹಿಂದೋಸ್ತಾನ್’ ಬಗ್ಗೆ ಮಿ. ಪರ್ಫೆಕ್ಶನಿಸ್ಟ್ ಆಮಿರ್ ಖಾನ್ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ವಿಶ್ವಾದ್ಯಂತ 7000 ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದರೂ, ಆಮಿರ್, ಅಮಿತಾಬ್, ಕತ್ರೀನಾರಂತಹ ದೊಡ್ಡ ಸ್ಟಾರ್ ಗಳು ಚಿತ್ರದಲ್ಲಿ ನಟಿಸಿದ್ದರೂ ‘ಥಗ್ಸ್ ಆಫ್ ಹಿಂದೋಸ್ತಾನ್’ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆಮಿರ್ ಈ ಬಗ್ಗೆ ಮಾತನಾಡಿದ್ದಾರೆ.

“ಪ್ರೇಕ್ಷಕರನ್ನು ರಂಜಿಸಲು ಥಗ್ಸ್ ಆಫ್ ಹಿಂದೋಸ್ತಾನ್ ಸೋತಿದೆ ಎನ್ನುವ ವಿಚಾರದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನೇ ಮಾಡಿದ್ದೇವೆ. ಆದರೆ ಏನೋ ತಪ್ಪು ನಡೆದಿದೆ. ಕೆಲವರು ಚಿತ್ರವನ್ನು ಮೆಚ್ಚಿದ್ದು, ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಹೆಚ್ಚಿನ ಜನರು ಚಿತ್ರವನ್ನು ಮೆಚ್ಚಿಕೊಂಡಿಲ್ಲ ಎನ್ನುವುದು ನಮಗೆ ಅರ್ಥವಾಗಿದೆ. ಈ ವಿಚಾರದಲ್ಲಿ ನಾನು ಅಭಿಮಾನಿಗಳೊಂದಿಗೆ ಕ್ಷಮೆ ಯಾಚಿಸುತ್ತೇನೆ” ಎಂದು ಆಮಿರ್ ಹೇಳಿದ್ದಾರೆ.

ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಆಮಿರ್ ಖಾನ್, ಕತ್ರಿನಾ ಕೈಫ್, ಫಾತಿಮಾ ಸನಾ ಶೇಖ್ ಮೊದಲಾದವರು ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News