ಇಂದಿರಾ ಗಾಂಧಿಯ ಬ್ಯಾಂಕ್ ರಾಷ್ಟ್ರೀಕರಣ ಒಂದು ವಂಚನೆ: ಪ್ರಧಾನಿ ಮೋದಿ ಆರೋಪ
Update: 2018-11-26 22:53 IST
ಮಂದಸೌರ್, ನ. 26: ‘ಗರೀಬ್ ಹಟಾವೊ’ ಹುಸಿ ಭರವಸೆ ಹಾಗೂ ಬ್ಯಾಂಕ್ ರಾಷ್ಟ್ರೀಕರಣ ಬಡವರ ಹೆಸರಲ್ಲಿ ನಡೆಸಿದ ವಂಚನೆ ಎಂದು ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರ್ಯಾಲಿಯಲ್ಲಿ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರ ನಡೆಸಿದ ಅರ್ಧದಷ್ಟು ಭಾಗ ತನಗೆ ದೊರೆತರೆ ದೇಶದಲ್ಲಿ ಪರಿವರ್ತನೆ ತರಲಾಗುವುದು ಎಂದು ಅವರು ಹೇಳಿದರು. 2014ರ ಚುನಾವಣೆ ಪ್ರಚಾರದ ಸಂದರ್ಭ ಬಿಜೆಪಿ ಹುಸಿ ಭರವಸೆ ನೀಡಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ ಹಿನ್ನೆಲೆಯಲ್ಲಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.