ಲೋಕಸಭೆ ಚುನಾವಣೆ ಬರುತ್ತಿದೆ, ಆದರೆ ಕಪ್ಪು ಹಣ ಬಂದೇ ಇಲ್ಲ: ಶಿವಸೇನೆ ವ್ಯಂಗ್ಯ

Update: 2018-11-27 15:56 GMT

 ಮುಂಬೈ, ನ. 26: ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ಹಿಂದೆ ತರುವುದಾಗಿ ನೀಡಿದ ಭರವಸೆ ಈಡೇರಿಸಲು ವಿಫಲವಾಗಿರುವ ಬಿಜೆಪಿಯನ್ನು ಶಿವಸೇನೆ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ನಮ್ಮ ದೇಶದಲ್ಲಿ ಜನರು ತಿಳಿಯಲು ಬಯಸುವ ಅನೇಕ ರಹಸ್ಯಗಳು ಇವೆ. ಅಂತಹ ರಹಸ್ಯಗಳಲ್ಲಿ ಕಪ್ಪು ಹಣದ ವಿಚಾರ ಕೂಡ ಒಂದು ಎಂದು ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.

ಶಿವಸೇನೆ ತನ್ನ ಮೈತ್ರಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಹಾಗೂ ಸಾರ್ವಜನಿಕರ ನಂಬಿಕೆಯನ್ನು ಛಿದ್ರಗೊಳಿಸಿದೆ ಎಂದು ಆರೋಪಿಸಿದೆ.

ವಿದೇಶದಲ್ಲಿರುವ ಕಪ್ಪು ಹಣ ಹಿಂದೆ ತರಲಾಗುವುದು ಹಾಗೂ ಪ್ರತಿ ನಾಗರಿಕರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ. ಸಾರ್ವಜನಿಕರಿಗೆ ಅದರ ಬಗ್ಗೆ ನಂಬಿಕೆ ಇದೆ. ಬಿಜೆಪಿ ಅವರ ನಂಬಿಕೆಯನ್ನು ಮತ ಗಳಿಸಲು ಬಳಸಿಕೊಳ್ಳುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ಬರುತ್ತಿದೆ. ಆದರೆ, ಕಪ್ಪು ಹಣ ಹಿಂದೆ ಬಂದಿಲ್ಲ, ಇಲ್ಲವೇ ವಿದೇಶದಿಂದ ಎಷ್ಟು ಕಪ್ಪು ಹಣ ಬರುತ್ತದೆ ಎಂದು ತಿಳಿದಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.

ಕಪ್ಪು ಹಣದ ಬಗ್ಗೆ ಆಡಳಿತಾರೂಢ ಪಕ್ಷ ವೌನವಾಗಿದೆ ಹಾಗೂ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ ಎಂದು ಶಿವಸೇನೆ ಸಂಪಾದಕೀಯದಲ್ಲಿ ಹೇಳಿದೆ.

ವಿದೇಶಗಳಿಂದ ಹಿಂದೆ ತರುವ ಸಂಪತ್ತಿನ ಮೊತ್ತದ ವಿವರ ಹಂಚಿಕೊಳ್ಳಲು ಪ್ರಧಾನಿ ಮಂತ್ರಿ ಅವರ ಕಚೇರಿ ನಿರಾಕರಿಸಿದೆ ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News