ನ.30ರ ಮೊದಲು ಮೊಬೈಲ್ ನಂಬರ್ ನೋಂದಾಯಿಸದ ಎಸ್ ಬಿಐ ಗ್ರಾಹಕರಿಗೆ ಇಂಟರ್ ನೆಟ್ ಬ್ಯಾಂಕಿಂಗ್ ಸೇವೆ ಡಿ.1ರಿಂದ ಸ್ಥಗಿತ

Update: 2018-11-29 04:44 GMT

ಹೊಸದಿಲ್ಲಿ, ನ.29:  ಸ್ಟೇಟ್ ಬ್ಯಾಂಕ್ ಇಂಡಿಯಾದ ಗ್ರಾಹಕರು ನವೆಂಬರ್ 30ರ ಮೊದಲು ತಮ್ಮ ಮೊಬೈಲ್  ನಂಬರ್ ನ್ನು ಬ್ಯಾಂಕ್  ಖಾತೆ ಜೊತೆ ನೋಂದಾಯಿಸದಿದ್ದರೆ ಡಿ.1ರಿಂದ ಅವರ ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಹಾರಗಳು ಸ್ಥಗಿತಗೊಳ್ಳಲಿದೆ.

ಸ್ಟೇಟ್ ಬ್ಯಾಂಕ್ ಇಂಡಿಯಾ ತನ್ನ ಗ್ರಾಹಕರಿಗೆ ಕೊನೆಯ ಬಾರಿ ಸೂಚನೆ ನೀಡಿದ್ದು, ನ.30ರ ಮೊದಲು ಎಸ್ ಬಿಐ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಬ್ಯಾಂಕ್ ಖಾತೆಯೊಂದಿಗೆ ಜೋಡೆಣೆಯಾಗಿರುವುದನ್ನು ದೃಢಪಡಿಸಬೇಕು. ಒಂದು ವೇಳೆ  ಗ್ರಾಹಕರು ಮೊಬೈಲ್ ನಂಬರ್ ನ್ನು ನೋಂದಾಯಿಸದಿದ್ದರೆ ಅಂತವರಿಗೆ ಡಿ.1ರಿಂದ  ಇಂಟರ್ ನೆಟ್ ಬ್ಯಾಂಕಿಂಗ್ ಸೇವೆ ಲಭ್ಯವಾಗದು. ಅವರ ಇಂಟರ್ ನೆಟ್ ಬ್ಯಾಂಕಿಂಗ್  ವ್ಯವಹಾರವನ್ನು ಸ್ಟೇಟ್ ಬ್ಯಾಂಕ್ ಇಂಡಿಯಾವು ತಡೆ ಹಿಡಿಯಲಿದೆ ಎಂದು ತಿಳಿದು ಬಂದಿದೆ. ಈ ಕಾರಣದಿಂದಾಗಿ ಇಂಟರ್ ನೆಟ್ ಬ್ಯಾಂಕ್ ವ್ಯವಹಾರ ನಡೆಸುವ ಎಸ್ ಬಿಐ ಗ್ರಾಹಕರು ಡಿ.30ರ ಮೊದಲು ತಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಈ ಬಗ್ಗೆ ಖಚಿತಪಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News