ಯುಪಿಎ ಆಡಳಿತದ ಜಿಡಿಪಿ ಪ್ರಮಾಣ ಇಳಿಸಿದ ಕೇಂದ್ರ ಸರಕಾರ!

Update: 2018-11-29 13:47 GMT

ಹೊಸದಿಲ್ಲಿ, ನ.29: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಸಂದರ್ಭ ಇದ್ದ ಜಿಡಿಪಿ ಪ್ರಮಾಣವನ್ನು ತಗ್ಗಿಸಿ ತೋರಿಸಿದ ಸರಕಾರದ ಬ್ಯಾಕ್-ಸೀರೀಸ್ ಡಾಟಾ ಹೊಸರಾಜಕೀಯ ವಿವಾದಕ್ಕೆ ಕಾರಣವಾಗಿದೆ.  ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ದೇಶದ  ಕೆಟ್ಟ ಆರ್ಥಿಕ ಸ್ಥಿತಿಯನ್ನು ಅಡಗಿಸಿಡುವ ಉದ್ದೇಶದಿಂದದುರುದ್ದೇಶಪೂರಿತ ಹಾಗೂ ಮೋಸದಿಂದ ಹೀಗೆ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

ಕೇಂದ್ರ ಅಂಕಿಅಂಶಗಳ ಕಚೇರಿ ಬಿಡುಗಡೆಗೊಳಿಸಿದ ಮಾಹಿತಿಯಂತೆ ಯುಪಿಎ ಆಡಳಿತಾವಧಿಯಲ್ಲಿ ಗರಿಷ್ಠ ಪ್ರಗತಿ ಪ್ರಮಾಣ 2010-11ರಲ್ಲಿ ಶೇ 8.5ರಲ್ಲಿದೆ. ಆದರೆ ಈ ಹಿಂದೆಯುಪಿಎ ಆಡಳಿತದ ಅವಧಿಯ ಗರಿಷ್ಠ ಪ್ರಗತಿ ಪ್ರಮಾಣ ಶೇ 10.3 ಎಂದು ಹೇಳಲಾಗಿತ್ತು. ಈ ಬದಲಾವಣೆಗೆ ಸಮರ್ಥನೆ ನೀಡಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ಕುಮಾರ್,  ವಿಸ್ತೃತ ರಿಕ್ಯಾಲಿಬ್ರೇಶನ್ ಪ್ರಕ್ರಿಯೆಯಿಂದ  ಹೀಗಾಗಿದೆ ಎಂದಿದ್ದಾರೆ. “ಎರಡು ಹಂತಗಳಲ್ಲಿ  ಖ್ಯಾತ ಅಂಕಿಅಂಶ ತಜ್ಞರು  ಹಿಂದಿನ ವರ್ಷಗಳ ಜಿಡಿಪಿ ಪ್ರಮಾಣವನ್ನುಪರಿಶೀಲಿಸಿದ್ದರು. ಯಾರನ್ನೂ ಉದ್ದೇಶಪೂರ್ವಕವಾಗಿ ತಪ್ಪು ದಾರಿಗೆಳೆಯುವ ಉದ್ದೇಶ ಸರಕಾರಕ್ಕಿಲ್ಲ'' ಎಂದು ಅವರು ಒತ್ತ ಹೇಳಿದ್ದಾರೆ. ಅಂತಾರಾಷ್ಟ್ರೀಯಮಾನದಂಡಗಳಂತೆಯೇ  ಎಲ್ಲಾ ಪ್ರಕ್ರಿಯೆ ನಡೆಸಲಾಗಿದೆ ಎಂದು ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರವೀಣ್ ಶ್ರೀವಾಸ್ತವ ಹೇಳಿದ್ದಾರೆ.

ಇದಕ್ಕೆ ತೀವ್ರ ಆಕ್ಷೇಪ ಸೂಚಿಸಿ ಟ್ವೀಟ್ ಮಾಡಿದ ಮಾಜಿ ವಿತ್ತ ಸಚಿವ ಪಿ ಚಿದಂಬರಂ  ಹೊಸ ಅಂಕಿಸಂಖ್ಯೆಗಳನ್ನು ``ಒಂದು ಕೆಟ್ಟ ಜೋಕ್'' ಎಂದು ಬಣ್ಣಿಸಿದ್ದಾರೆ. ``ನೀತಿಆಯೋಗದ ಪರಿಷ್ಕೃತ ಜಿಡಿಪಿ ಸಂಖ್ಯೆಗಳು ಒಂದು ಜೋಕ್, ಅದೊಂದು ಕೆಟ್ಟ ಜೋಕ್,'' ಎಂದು ಅವರ ಒಂದು ಟ್ವೀಟ್ ಹೇಳಿದರೆ, ಇನ್ನೊಂದರಲ್ಲಿ ``ವಾಸ್ತವವಾಗಿ, ಅದು ಕೆಟ್ಟಜೋಕ್ ಗಿಂತಲೂ ಕಡೆಯಾಗಿದೆ. ಈ ಸಂಖ್ಯೆಗಳು ಕೈಚಳಕದ ಕೆಲಸವಾಗಿದೆ'' ಎಂದಿದ್ದಾರೆ.

ಬುಧವಾರ ಬಿಡುಗಡೆಗೊಳಿಸಲಾದ ಎಲ್ಲಾ ವರ್ಷಗಳ ಪ್ರಗತಿ ಪ್ರಮಾಣದಲ್ಲಿ ಇಳಿಕೆ ತೋರಿಸಲಾಗಿದೆ. ಅದರಂತೆ 2012-13ರಲ್ಲಿ ಪ್ರಗತಿ ಪ್ರಮಾಣ  ಶೇ 5.5 ಆಗಿದ್ದರೆ ಮುಂದಿನವರ್ಷಗಳಲ್ಲಿ ಅದು ಶೇ 6.4, ಶೇ 7.4, ಶೇ 8.2, ಶೇ 7.1 ಹಾಗೂ ಶೇ 6.7 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News