×
Ad

ದಿಲ್ಲಿಯ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಮಹಾರಾಷ್ಟ್ರ ರೈತನ ಸಾವು

Update: 2018-12-01 20:19 IST

ಹೊಸದಿಲ್ಲಿ,ಡಿ.1: ದಿಲ್ಲಿಯಲ್ಲಿ ಎರಡು ದಿನಗಳ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ರೈತನೋರ್ವ ಶನಿವಾರ ಮಧ್ಯದಿಲ್ಲಿಯ ಪಹಾಡಗಂಜ್ ಪ್ರದೇಶದ ಕಟ್ಟಡವೊಂದರಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ಸಾವಿನ ಬಗ್ಗೆ ಯಾವುದೇ ಶಂಕೆಯಿಲ್ಲವೆಂದು ಪೊಲೀಸರು ತಿಳಿಸಿದರಾದರೂ,ತನಿಖೆ ಪ್ರಗತಿಯಲ್ಲಿದೆ ಮತ್ತು ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News