ಶಾಸ್ತ್ರ ಹೇಳಿ ಗಾಳ ಇಕ್ಕಿದ ಪ್ರಿಯಾಂಕ ಚೋಪ್ರಾಗೆ ಜನರಿಂದ ಮಹಾಮಂಗಳಾರತಿ!

Update: 2018-12-02 16:42 GMT

ಮುಂಬೈ, ಡಿ.2: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೊನಾಸ್ ರ ಮದುವೆ ಕಾರ್ಯಕ್ರಮ ಕ್ರಿಶ್ಚಿಯನ್ ಸಂಪ್ರದಾಯದಂತೆ ಜೋಧ್ ಪುರದ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ನಡೆದಿದ್ದು, ನಂತರ ಕಾರ್ಯಕ್ರಮದ ಫೋಟೊಗಳನ್ನು ಪ್ರಿಯಾಂಕಾ ಹಂಚಿಕೊಂಡಿದ್ದರು.

ಮದುವೆ ಕಾರ್ಯಕ್ರಮದ ಫೋಟೊಗಳಿಗಾಗಿ ಕಾದಿದ್ದ ಅಭಿಮಾನಿಗಳು ಮೊದಲಿಗೆ ನೋಡಿದ್ದು, ಜೋಧ್ ಪುರದಲ್ಲಿ ಸಿಡಿದ ಬಗೆಬಗೆಯ ಪಟಾಕಿಗಳನ್ನು. ಕಾರ್ಯಕ್ರಮದ ಅಂಗವಾಗಿ ಗಂಟೆಗಳ ಕಾಲ ಸುಡುಮದ್ದು ಪ್ರದರ್ಶನ ನಡೆದಿತ್ತು. ಹಲವರು ನವದಂಪತಿಗೆ ಶುಭಾಶಯ ತಿಳಿಸಿದರೆ, ಕೆಲವರು ಪಟಾಕಿ ಸಿಡಿಸಿದ ವಿಚಾರದಲ್ಲಿ ಪ್ರಿಯಾಂಕರನ್ನು ತರಾಟೆಗೆತ್ತಿಕೊಂಡರು. ದೀಪಾವಳಿ ಸಂದರ್ಭ ಮಾಲಿನ್ಯ ವಿರೋಧ ಆಂದೋಲನದ ಭಾಗವಾಗಿ ಪಟಾಕಿಗಳ ಬಗ್ಗೆ ಪ್ರಿಯಾಂಕ ಜಾಗೃತಿ ಮೂಡಿಸಿದ್ದೇ ಇದಕ್ಕೆ ಕಾರಣ.

ಇನ್ನೊಂದು ವಿಶೇಷತೆಯೆಂದರೆ ಪ್ರಿಯಾಂಕ ‘ಬ್ರೀತ್ ಫ್ರೀ’ ಎಂಬ ಅಸ್ತಮಾ ಸಂಬಂಧಿತ ಆಂದೋಲನದ ರಾಯಭಾರಿಯೂ ಆಗಿದ್ದಾರೆ. ಒಂದೆಡೆ ದೀಪಾವಳಿ ಸಂದರ್ಭ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿ, ಇನ್ನೊಂದೆಡೆ ತನ್ನ ಮದುವೆ ಕಾರ್ಯಕ್ರಮದಲ್ಲಿ ಭಾರೀ ಸುಡುಮದ್ದು ಪ್ರದರ್ಶನಕ್ಕೆ ಅವಕಾಶ ನೀಡಿದ ಪ್ರಿಯಾಂಕರದ್ದು ಬೂಟಾಟಿಕೆ ಎಂದು ಹಲವು ಟ್ವಿಟರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News