×
Ad

ಇನ್ ಸ್ಪೆಕ್ಟರ್ ಸುಬೋಧ್ ಸಿಂಗ್ ಹಂತಕರನ್ನು ಶಿಕ್ಷಿಸುವಂತೆ ಐಪಿಎಸ್ ಅಧಿಕಾರಿಗಳ ಸಂಘದ ಆಗ್ರಹ

Update: 2018-12-04 19:55 IST

ಹೊಸದಿಲ್ಲಿ, ಡಿ.4: ಉತ್ತರ ಪ್ರದೇಶದ ಪೊಲೀಸ್ ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಸಾವಿಗೆ ಕಾರಣರಾದವರಿಗೆ ಕಠಿಣ ದಂಡನೆಯನ್ನು ವಿಧಿಸುವಂತೆ ಐಪಿಎಸ್ ಸಂಘವು ಮಂಗಳವಾರ ಆಗ್ರಹಿಸಿದೆ.

ಸಿಂಗ್ ಅವರ ಮೇಲಿನ ಮಾರಣಾಂತಿಕ ದಾಳಿಯನ್ನು ನಾವು ಖಂಡಿಸುತ್ತೇವೆ. ಸಿಂಗ್ ಅವರ ಶೌರ್ಯವನ್ನು ನಾವು ಪ್ರಶಂಸಿಸುತ್ತೇವೆ. ಅನಾಹುತಕಾರಿ ಗುಂಪು ಜಮಾವಣೆಯಿಂದ ಪೊಲೀಸ್ ಅಧಿಕಾರಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ಸಂಘವು ಟ್ವೀಟಿಸಿದೆ.

ಉತ್ತರ ಪ್ರದೇಶದ ಬುಲಂದಶಹರ್ ಜಿಲ್ಲೆಯಲ್ಲಿ ಸೋಮವಾರ ಅಕ್ರಮ ಕಸಾಯಿಖಾನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ನಿಯಂತ್ರಿಸಲು ಸಿಂಗ್ ಮತ್ತು ಇತರ ಕೆಲವು ಪೊಲೀಸರು ಪ್ರಯತ್ನಿಸಿದ್ದರು. ಪೊಲೀಸರ ಸಂಖ್ಯೆ ಕಡಿಮೆಯಿದ್ದರಿಂದ ಪರಿಸ್ಥಿತಿ ಕೈಮೀರಿತ್ತು. ಸಿಂಗ್ ಅವರನ್ನು ಕಲ್ಲೇಟಿನಿಂದ ಗಾಯಗೊಳಿಸಿದ್ದ ಗುಂಪು ಅವರ ವಾಹನವನ್ನು ಬೆನ್ನಟ್ಟಿ ಅಡ್ಡಗಟ್ಟಿದ ಬಳಿಕ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು.

 ಮುಖ್ಯಮಂತ್ರ್ರಿ ಆದಿತ್ಯನಾಥ್ ಅವರು ಸಿಂಗ್ ಕುಟುಂಬಕ್ಕೆ 40 ಲ.ರೂ. ಮತ್ತು ಅವರ ಹೆತ್ತವರಿಗೆ 10 ಲ.ರೂ.ಪರಿಹಾರ ಹಾಗೂ ಕುಟುಂಬದ ಸದಸ್ಯರೋರ್ವರಿಗೆ ಸರಕಾರಿ ನೌಕರಿಯ ಕೊಡುಗೆಯನ್ನು ಘೋಷಿಸಿದ್ದಾರೆ. 2015ರಲ್ಲಿ ದಾದ್ರಿಯಲ್ಲಿ ಗುಂಪು ಥಳಿತದಿಂದ ಮುಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಂಗ್ ನಡೆಸಿದ್ದರು ಮತ್ತು ಇದೇ ಕಾರಣದಿಂದ ಅವರನ್ನು ಕೊಲ್ಲಲಾಗಿದೆ ಎಂದು ಅವರ ಸೋದರಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News