ವರ್ಮಾ-ಅಸ್ತಾನಾ ನಡುವಿನ ಕಲಹ ಸಿಬಿಐಯನ್ನು ಗೇಲಿಗೀಡು ಮಾಡಿತ್ತು

Update: 2018-12-05 16:11 GMT

ಹೊಸದಿಲ್ಲಿ,ಡಿ.5: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರ ನಡುವಿನ ಕಲಹವು ಅಭೂತಪೂರ್ವ ಮತ್ತು ಅಸಾಧಾರಣ ಸ್ಥಿತಿಯನ್ನು ಸೃಷ್ಟಿಸಿದೆ ಎಂದು ಕೇಂದ್ರವು ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ಹಿರಿಯ ಅಧಿಕಾರಿಗಳಾದ ವರ್ಮಾ ಮತ್ತು ಅಸ್ತಾನಾ ಬಹಿರಂಗವಾಗಿ ಕಚ್ಚಾಡಿಕೊಂಡಿದ್ದು ಸಿಬಿಐ ಗೇಲಿಗೊಳಗಾಗುವಂತೆ ಮಾಡಿದೆ. ಉಭಯತರ ನಡುವಿನ ವಿವಾದ ಸಿಬಿಐನ ಪ್ರಾಮಾಣಿಕತೆ ಮತ್ತು ಗೌರವಕ್ಕೆ ಕುಂದನ್ನುಂಟು ಮಾಡಿತ್ತು. ಸಿಬಿಐನಲ್ಲಿ ಸಾರ್ವಜನಿಕರ ವಿಶ್ವ್ವಾಸದ ಮರುಸ್ಥಾಪನೆಯು ಸರಕಾರದ ಮುಖ್ಯ ಗುರಿಯಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಮು.ನ್ಯಾ.ರಂಜನ ಗೊಗೊಯಿ ಅವರ ನೇತೃತ್ವದ ಪೀಠಕ್ಕೆ ತಿಳಿಸಿದರು.

ಸರಕಾರದ ಹಸ್ತಕ್ಷೇಪವನ್ನು ಸಮರ್ಥಿಸಿಕೊಂಡ ಅವರು,ಇಬ್ಬರು ಅಧಿಕಾರಿಗಳ ಜಗಳದಲ್ಲಿ ಸರಕಾರವು ಹಸ್ತಕ್ಷೇಪ ನಡೆಸುವುದು ಅತ್ಯಗತ್ಯವಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News