ಡ್ರೋನ್ ಮೂಲಕ ಆಹಾರ ವಿತರಿಸಲು ಝೊಮಾಟೊ ಚಿಂತನೆ

Update: 2018-12-05 17:25 GMT

ಹೊಸದಿಲ್ಲಿ, ಡಿ.5: ಭಾರತದಲ್ಲಿ ಡ್ರೋನ್ ಮೂಲಕ ಆಹಾರ ವಿತರಿಸುವ ಯೋಜನೆ ರೂಪಿಸಿರುವ ಝೊಮಾಟೊ, ಈ ನಿಟ್ಟಿನಲ್ಲಿ ಲಕ್ನೊ ಮೂಲದ ‘ಟೆಕ್‌ಈಗಲ್ ಇನ್ನೊವೇಷನ್ಸ್’ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ.

ಡ್ರೋನ್ ತಯಾರಿಕೆಗೆ ಹೆಸರಾಗಿರುವ ಟೆಕ್‌ಈಗಲ್ ಸಂಸ್ಥೆಯ ನೆರವಿನಿಂದ , ಅತ್ಯಾಧುನಿಕ ರೋಟರ್‌ಗಳ ಮೂಲಕ ಕೇಂದ್ರದಿಂದ ಕೇಂದ್ರಕ್ಕೆ ಆಹಾರ ವಿತರಣಾ ಜಾಲವನ್ನು ರೂಪಿಸಲು ಸಾಧ್ಯವಾಗಲಿದೆ. ಈಗಿನ್ನೂ ಈ ಯೋಜನೆ ಪ್ರಾಥಮಿಕ ಹಂತದಲ್ಲಿದೆ. ಭವಿಷ್ಯದಲ್ಲಿ ಬಳಕೆದಾರರು ತಾವು ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಿದ ಖಾದ್ಯಗಳನ್ನು ಡ್ರೋನ್ ಮೂಲಕ ಮನೆಬಾಗಿಲಿಗೆ ತಲುಪಿಸುವುದನ್ನು ನಿರೀಕ್ಷಿಸಬಹುದು ಎಂದು ಝೊಮಾಟೊದ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ತಿಳಿಸಿದ್ದಾರೆ. ಆಹಾರ ವಸ್ತುಗಳನ್ನು ವಿತರಿಸುವ ಝೊಮಾಟೊ ಸಂಸ್ಥೆ ದೇಶದಾದ್ಯಂತದ 100 ನಗರಗಳಲ್ಲಿ ಆಹಾರ ವಸ್ತುಗಳನ್ನು ವಿತರಿಸುವ 75,000 ರೆಸ್ಟಾರೆಂಟ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News