ಮೊದಲ ಟೆಸ್ಟ್ : ಆಸ್ಟ್ರೇಲಿಯಕ್ಕೆ 59 ರನ್ ಹಿನ್ನಡೆ

Update: 2018-12-07 09:56 GMT

ಆಡಿಲೇಡ್, ಡಿ.7: ಇಲ್ಲಿ ನಡೆಯುತ್ತಿರುವ ಪ್ರವಾಸ ಭಾರತ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್ ನ ಎರಡನೇ ದಿನ ಆತಿಥೇಯ ಆಸ್ಟ್ರೇಲಿಯ ಮೊದಲ ಇನಿಂಗ್ಸ್ ನಲ್ಲಿ 59 ರನ್ ಗಳ ಹಿನ್ನಡೆ ಅನುಭವಿಸಿದೆ.

ದಿನದಾಟ ಕೊನೆಗೊಂಡಾಗ ಆಸ್ಟ್ರೇಲಿಯ ಮೊದಲ  ಇನಿಂಗ್ಸ್ ನಲ್ಲಿ 88 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 191 ರನ್ ಗಳಿಸಿದೆ.

 61 ರನ್ ಗಳಿಸಿರುವ ಟ್ರಾವಿಸ್ ಹೆಡ್ ಮತ್ತು 8 ರನ್ ಗಳಿಸಿರುವ ಮಿಚೆಲ್ ಸ್ಟಾರ್ಕ್  ಔಟಾಗದೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಭಾರತ ಮೊದಲ ದಿನದಾಟದಂತ್ಯಕ್ಕೆ 87.5 ಓವರ್ ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 250 ರನ್ ಗಳಿಸಿತ್ತು. ಇಂದು ಭಾರತದ ಬ್ಯಾಟಿಂಗ್ ಮುಂದುವರಿಸಿದ ಕೊನೆಯ ಆಟಗಾರ  ಮುಹಮ್ಮದ್ ಶಮಿ(6)  ಈ ಮೊತ್ತಕ್ಕೆ ಯಾವುದೇ ರನ್ ಸೇರಿಸಿದೆ ಔಟಾದರು. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್ ನಲ್ಲಿ 250 ರನ್ ಗಳಿಸಿತು.

ಆಸ್ಟ್ರೇಲಿಯ ಮೊದಲ ಇನಿಂಗ್ಸ್ ಆರಂಭಿಸಿ ಖಾತೆ ತೆರೆಯುವ ಮೊದಲೇ ಆರಂಭಿಕ ದಾಂಡಿಗ ಮಾರ್ಕುಸ್  (0) ಅವರನ್ನು ಮೊದಲ ಓವರ್ ನ ಮೂರನೇ  ಎಸೆತದಲ್ಲಿ ಇಶಾಂತ್ ಶರ್ಮಾ  ಪೆವಿಲಿಯನ್  ಗೆ ಅಟ್ಟಿದರು.

 ರವಿಚಂದ್ರನ್ ಅಶ್ವಿನ್ (50ಕ್ಕೆ 3),  ಇಶಾಂತ್ ಶರ್ಮಾ (31ಕ್ಕೆ 2),ಜಸ್ ಪ್ರೀತ್ ಬುಮ್ರಾ (34ಕ್ಕೆ 2) ದಾಳಿಯನ್ನು ಎದುರಿಸಲಾರದೆ  ಹ್ಯಾರಿಸ್ 26 ರನ್, ಉಸ್ಮಾನ್ ಖ್ವಾಜಾ 28 ರನ್,  ಶಾನ್ ಮಾರ್ಷ್ 2 ರನ್ , ಪೀಟರ್ ಹ್ಯಾಂಡ್ಸ್ ಕಾಂಬ್ 34 ರನ್, ವಿಕೆಟ್ ಕೀಪರ್ ಹಾಗೂ ನಾಯಕ ಟಿಮ್ ಪೈನ್ 5 ರನ್, ಪ್ಯಾಟ್ ಕಮಿನ್ಸ್ 10 ರನ್ ಗಳಿಸಿ  ಔಟಾದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News