ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಕೆಗೆ ಗಡುವು ಮೂರು ತಿಂಗಳು ವಿಸ್ತರಣೆ

Update: 2018-12-08 15:52 GMT

ಹೊಸದಿಲ್ಲಿ,ಡ.8: ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವನ್ನು ಸರಕಾರವು ಮೂರು ತಿಂಗಳು ವಿಸ್ತರಿಸಿದೆ. ಜಿಎಸ್‌ಟಿಆರ್-9, ಜಿಎಸ್‌ಟಿಆರ್-9ಎ ಮತ್ತು ಜಿಎಸ್‌ಟಿಆರ್-9ಸಿಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು 2018,ಡಿ.31ರಿಂದ 2019,ಮಾ.31ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸೀಮಾಸುಂಕ ಮಂಡಳಿಯು ಅಧಿಸೂಚನೆಯಲ್ಲಿ ತಿಳಿಸಿದೆ.

ಅಗತ್ಯ ಫಾರ್ಮ್‌ಗಳು ಜಿಎಸ್‌ಟಿ ಕಾಮನ್ ಪೋರ್ಟಲ್‌ನಲ್ಲಿ ಶೀಘ್ರದಲ್ಲಿಯೇ ಲಭ್ಯವಾಗಲಿವೆ ಎಂದೂ ಅದು ತಿಳಿಸಿದೆ.

ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಕೆಗೆ ಗಡುವನ್ನು ವಿಸ್ತ್ತರಿಸುವಂತೆ ಅಖಿಲ ಭಾರತ ವ್ಯಾಪಾರಿಳ ಒಕ್ಕೂಟವು ವಿತ್ತಸಚಿವ ಅರುಣ್ ಜೇಟ್ಲಿ ಅವರನ್ನು ಆಗ್ರಹಿಸಿತ್ತು. ಜಿಎಸ್‌ಟಿ ಪರಿಕಲ್ಪನೆ ಹೆಚ್ಚಿನ ವ್ಯಾಪಾರಿಗಳಿಗೆ ಈಗಲೂ ಸ್ಪಷ್ಟವಾಗಿಲ್ಲ ಮತ್ತು ಅವರಿಗೆ ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಕೆಯ ಹೊಣೆಗಾರಿಕೆಯ ಅರಿವೂ ಇಲ್ಲ ಎಂದು ಅದು ಸಚಿವರ ಗಮನಕ್ಕೆ ತಂದಿತ್ತು.

ಇಂತಹ ಸ್ಥಿತಿಯಲ್ಲಿ ನಿಗದಿತ ಅವಧಿಯೊಳಗೆ ವಾರ್ಷಿಕ ಜಿಎಸ್‌ಟಿ ರಿಟರ್ನ್‌ಗಳನ್ನು ಸಲ್ಲಿಸಲು ವ್ಯಾಪಾರಿಗಳಿಗೆ ಸಾಧ್ಯವಾಗುವುದಿಲ್ಲ,ಹೀಗಾಗಿ 2017-18ನೇ ಸಾಲಿಗೆ ರಿಟರ್ನ್ ಸಲ್ಲಿಕೆ ಗಡುವನ್ನು 2019,ಮಾ.31ರವರೆಗೆ ವಿಸ್ತರಿಸುವಂತೆ ಅದು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News