5 ದಿನಗಳಲ್ಲಿ 400 ಕೋ.ರೂ. ಬಾಚಿದ 2.0

Update: 2018-12-09 02:15 GMT

ಬಿಡುಗಡೆಗೆ ಮುನ್ನವೇ ಭಾರೀ ಸುದ್ದಿ ಮಾಡಿದ್ದ 2.0 ಈಗ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಭಾರತದಲ್ಲಿ 10 ಸಾವಿರ ಸ್ಕ್ರೀನ್‌ಗಳಲ್ಲಿ ಸೇರಿದಂತೆ ದೇಶಾದ್ಯಂತ 10,500 ಪರದೆಗಳಲ್ಲಿ ತೆರೆಕಂಡ ಈ ಚಿತ್ರವು ಈಗಾಗಲೇ 400 ಕೋಟಿ ರೂ. ಕ್ಲಬ್ ಪ್ರವೇಶಿಸಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ, ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ 2.0 ದಿಗ್ವಿಜಯ ಮುಂದುವರಿಸಿದೆ. ಬರೋಬ್ಬರಿ 543 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಾಕ್ಸ್‌ಆಫೀಸ್ ಓಟ ಮುಂದುವರಿದಲ್ಲಿ ಮುಂದಿನ ಎರಡು ವಾರಗಳಲ್ಲಿ ಚಿತ್ರ 1 ಸಾವಿರ ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿ ದರೂ ಅಚ್ಚರಿಯಿಲ್ಲವೆಂದು ಸಿನೆಮಾ ಪಂಡಿತರ ಅಭಿಪ್ರಾಯವಾಗಿದೆ.

2.0, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆ ಗಳಲ್ಲಿ ಬಿಡುಗಡೆಗೊಂಡಿದ್ದು, ಎಲ್ಲೆಡೆ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 2.0 ಚಿತ್ರದ ಹಿಂದಿ ಆವೃತ್ತಿಯ ಸ್ಯಾಟಲೈಟ್ ಹಾಗೂ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಝೀ ಟಿವಿ 125 ಕೋಟಿ ರೂ.ಗೆ ಖರೀದಿಸಿದೆ.

ರಜನಿಕಾಂತ್, ಅಕ್ಷಯ್‌ಕುಮಾರ್, ಆ್ಯಮಿಜಾಕ್ಸನ್ ಅಭಿನಯದ 2.0 ಚಿತ್ರವು 2010ರಲ್ಲಿ ತೆರೆಕಂಡ ಶಂಕರ್ ನಿರ್ದೇಶನದ ಎಂದಿರನ್ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರದಲ್ಲಿ ರಜನಿಕಾಂತ್ ವಿಜ್ಞಾನಿ ಡಾ. ವಶೀಗರನ್ ಹಾಗೂ ರೊಬೊಟ್ ಚಿಟ್ಟಿಯ ಪಾತ್ರದೊಂದಿಗೆ ಮರಳಿದ್ದರೆ, ಖಳನಾಯಕ ಪಕ್ಷಿರಾಜನ್ ಪಾತ್ರದಲ್ಲಿ ಅಕ್ಷಯ್ ಅಭಿನಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News