×
Ad

ವಜ್ರೋದ್ಯಮಿಯ ಹತ್ಯೆ: ಜನಪ್ರಿಯ ಸೀರಿಯಲ್ ನಟಿ ಪೊಲೀಸ್ ವಶಕ್ಕೆ

Update: 2018-12-09 14:20 IST

ಮುಂಬೈ, ಡಿ.9: ಇಲ್ಲಿನ ವಜ್ರ ಉದ್ಯಮಿ ರಾಜೇಶ್ವರ್ ಉದಾನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಜಕೀಯ ಮುಖಂಡರೊಬ್ಬರನ್ನು ಬಂಧಿಸಿದ್ದು, ಜನಪ್ರಿಯ ಟಿವಿ ನಟಿ ಹಾಗೂ ಮಾಡೆಲ್ ದೇಬೊಲಿನಾ ಭಟ್ಟಾಚಾರ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.

ಬಂಧಿತ ರಾಜಕಾರಣಿಯನ್ನು ಸಚಿನ್ ಪವಾರ್ ಎಂದು ಗುರುತಿಸಲಾಗಿದ್ದು, ಈತ ಮೃತ ಉದ್ಯಮಿಯ ಜತೆ ನಿಕಟ ನಂಟು ಹೊಂದಿದ್ದ. ಈತ ಈ ಮೊದಲು ಬಿಜೆಪಿ ಪಕ್ಷದಲ್ಲಿದ್ದ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಜನಪ್ರಿಯ ನಟಿ ದೇಬೊಲಿನಾ ಭಟ್ಟಾಚಾರ್ಯ ಅವರನ್ನು ವಶಕ್ಕೆ ಪಡೆದ ಘೋಟ್ಕೊಪರ್ ಪೊಲೀಸರು ವಿಚಾರಣೆಗೆ ಗುರಿಪಡಿಸಿದರು. ಈ ವಜ್ರೋದ್ಯಮಿ ನಾಪತ್ತೆಯಾಗಿ ಮೂರು ದಿನಗಳ ಬಳಿಕ ರಾಯಗಡ ಜಿಲ್ಲೆಯ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಆದಾಗ್ಯೂ ಅಧಿಕಾರಿಗಳು ಈ ಪ್ರಕರಣದಲ್ಲಿ ನಟಿಯ ಪಾತ್ರದ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲ. ಆದರೆ ಮನೋರಂಜನಾ ಉದ್ಯಮಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರಿಗೆ ಪ್ರಶ್ನಿಸುವ ಸಲುವಾಗಿ ಸಮನ್ಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಉದಾನಿ ನವೆಂಬರ್ 28ರಂದು ತಮ್ಮ ಕಚೇರಿಯಿಂದ ನಾಪತ್ತೆಯಾಗಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ನವಿಮುಂಬೈನ ರಬಲೆಯಲ್ಲಿ ಅವರ ಮೊಬೈಲ್ ಪತ್ತೆಯಾಗಿತ್ತು. ಒಂದು ವಾರದ ಬಳಿಕವೂ ಅವರು ಪತ್ತೆಯಾಗದಿದ್ದಾಗ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು. ತಮ್ಮನ್ನು ಪಂತ್ ನಗರ ಮಾರುಕಟ್ಟೆಯಲ್ಲಿ ಬಿಡುವಂತೆ ಉದಾನಿ ಸೂಚಿಸಿದ್ದರು. ಬಳಿಕ ಒಂದು ವಾಹನದಲ್ಲಿ ತೆರಳಿದ್ದರು ಎಂದು ಅವರ ಚಾಲಕ ಸ್ಪಷ್ಟಪಡಿಸಿದ್ದ. ಡಿಸೆಂಬರ್ 5ರಂದು ಕೊಳೆತ ಸ್ಥಿತಿಯಲ್ಲಿದ್ದ ಅವರ ದೇಹ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News