ರಾಷ್ಟ್ರೀಯ ಪಿಂಚಣಿ ಯೋಜನೆ: ನೌಕರರಿಗೆ ಸಿಹಿ ಸುದ್ದಿ

Update: 2018-12-10 17:50 GMT

ಹೊಸದಿಲ್ಲಿ, ಡಿ. 10: ಕೇಂದ್ರ ಸರಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಕೇಂದ್ರ ಸರಕಾರ ತನ್ನ ಕೊಡುಗೆಯನ್ನು ಶೇ. 10ರಿಂದ ಶೇ. 14ಕ್ಕೆ ಏರಿಕೆ ಮಾಡಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಸೋಮವಾರ ತಿಳಿಸಿದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರಸ್ತುತ ನೌಕರರು ಶೇ. 10 ಕೊಡುಗೆ ನೀಡುತ್ತಿದ್ದಾರೆ. ಆರಂಭದಲ್ಲಿ ಪಿಂಚಣಿ ಯೋಜನೆಯನ್ನು ಕೇವಲ ಸರಕಾರಿ ಉದ್ಯೋಗಿಗಳಿಗೆ ಮಾತ್ರ ಆರಂಭಿಸಲಾಗಿತ್ತು. ಆದರೆ, 2009ರಿಂದ ಎಲ್ಲರಿಗೂ ಮುಕ್ತವಾಗಿರಿಸಿತು. ಕಳೆದ ವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿವೃತ್ತಿಯ ಸಂದರ್ಭ ಈ ಪೂರ್ಣ ಮೊತ್ತವನ್ನು ಹಿಂದೆ ತೆಗೆಯುವುದನ್ನು ತೆರಿಗೆ ಮುಕ್ತಗೊಳಿಸಲಾ ಗುವುದು. ನೌಕರರ ಹಿತಾಸಕ್ತಿ ಪರಿಗಣಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News