ಯೋಜನೆ ಪರಿಸರಕ್ಕೆ ಪೂರಕವಾಗಿರಲಿ

Update: 2018-12-10 18:35 GMT

 ಮಾನ್ಯರೇ,
‘ಪಶ್ಚಿಮ ಘಟ್ಟಗಳನ್ನು ಉಳಿಸಿ’ ಎಂಬ ಹೋರಾಟ ತೀವ್ರಗೊಳ್ಳುತ್ತಿದೆ. ಪಶ್ಚಿಮ ಘಟ್ಟ, ಅರಣ್ಯ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳಿಂದಲೇ ನಾಶವಾಗುತ್ತಿದೆ ಎಂದು ಸ್ವತಃ ಪರಿಸರವಾದಿಗಳು, ಯೋಜನಾ ನಿರಾಶ್ರಿತರು ಹೇಳುತ್ತಿರುವುದು ಆತಂಕಕಾರಿ ವಿಚಾರ. ಮಲೆನಾಡು ಉಳಿಸಿ ಹೋರಾಟ ಸಮಿತಿ ಆಯೋಜಿಸಿದ ಸಭೆಯಲ್ಲಿ ಈ ರೀತಿಯ ಅಭಿಪ್ರಾಯ ಒಮ್ಮತದಿಂದ ಮೂಡಿ ಬಂದಿದೆ. ಪರಿಸರ ಬೆಳೆಸುವುದು, ಉಳಿಸುವುದು ಕರ್ತವ್ಯ. ಆದರೆ ಕೆಲ ಅರಣ್ಯಾಧಿಕಾರಿಗಳು ಅರಣ್ಯೀಕರಣದ ಹೆಸರಿನಲ್ಲಿ ಯಾವುದಕ್ಕೂ ಪ್ರಯೋಜನ ಸಿಗದ ಗಿಡಗಳನ್ನು ಘಟ್ಟದಲ್ಲಿ ಬೆಳೆಸಿದ್ದರಿಂದ ಆತಂಕ ಶುರುವಾಯಿತು ಎಂದು ಪರಿಸರವಾದಿಗಳೇ ಹೇಳಿದ್ದಾರೆ. ಘಟ್ಟದಲ್ಲಿ ಅಕೇಷಿಯಾ, ಸಾಗುವಾನಿ, ಮ್ಯಾಂಜಿಯಮ್ ಮರಗಳು ಬೇಕೇ ಎಂಬುದು ಮುಖ್ಯ ಪ್ರಶ್ನೆ. ಇವುಗಳಿಂದ ಕಾಡುಗಳಲ್ಲಿ ಇರುವ ವನ್ಯಜೀವಿಗಳಿಗೆ ಆಹಾರ ಸಿಗದು. ಅರಣ್ಯೀಕರಣದ ಹೆಸರಲ್ಲಿ ಟಿಂಬರ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಕೇಳಿ ಬಂದಿರುವ ಆರೋಪದಲ್ಲಿ ಸಹ ಹುರುಳಿಲ್ಲ. ಕಾಡಲ್ಲಿರುವ ಪ್ರಾಣಿಗಳಿಗೆ ತಿನ್ನಲಾಗದ ಗಿಡಗಳನ್ನು ಬೆಳೆಸಿದ್ದರಿಂದ ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರಲು ಆರಂಭಿಸಿದವು. ಜೊತೆಗೆ ಕಾಡೂ ನಾಶವಾಯಿತು. ಅಭಿವೃದ್ಧಿ ಹೆಸರಲ್ಲಿ ಬರುವ ಯೋಜನೆಗಳು ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು.

Writer - - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News