ಹಿಂದಿ ಭಾಷಿಕ ರಾಜ್ಯಗಳಲ್ಲಿ ಗೆದ್ದ ರಾಹುಲ್ ಪ್ರಚಾರ ವೈಖರಿ

Update: 2018-12-11 17:30 GMT

ಹೊಸದಿಲ್ಲಿ,ಡಿ.11: ಮೂರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿಯ ಚುನಾವಣಾ ಹಿನ್ನಡೆಯು ಮುಂದಿನ ದಿನಗಳಲ್ಲಿ ರಾಜಕೀಯ ಪಂಡಿತರ ಚರ್ಚೆಯ ವಸ್ತುವಾಗಬಹುದು. ಆದರೆ ಕಾಂಗ್ರೆಸ್ ಬಳಿ ಇದಕ್ಕೆ ಖಚಿತ ಉತ್ತರವಿದೆ...,ಅದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರಲ್ಲಿ ಹೊಸದಾಗಿ ಕಂಡು ಬಂದಿರುವ ಪ್ರಚಾರ ಶಕ್ತಿ.

ಒಂದು ಕಾಲದಲ್ಲಿ ‘ಪುಕ್ಕಲು ರಾಜಕಾರಣಿ’ ಎಂದು ಟೀಕಾಕಾರರಿಂದ ಬಣ್ಣಿಸಲ್ಪಟ್ಟಿದ್ದ ರಾಹುಲ್ ಅಕ್ಟೋಬರ್ 6ರಿಂದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಮಿಝೊರಾಂ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚುಕಡಿಮೆ ಪ್ರತಿದಿನವೆಂಬಂತೆ ಸುತ್ತಾಡಿ 82 ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದರು ಮತ್ತು ಏಳು ರೋಡ್ ಶೋಗಳನ್ನು ನಡೆಸಿದ್ದರು.

ಈ ಎಲ್ಲ ರಾಜ್ಯಗಳಲ್ಲಿ ತನ್ನ ಸ್ಫೂರ್ತಿಯುತ ಪ್ರಚಾರದಲ್ಲಿ ರೈತರ ಸಂಕಷ್ಟ,ರಫೇಲ್ ಒಪ್ಪಂದ,ಭ್ರಷ್ಟಾಚಾರ ಮತ್ತು ಮಹಿಳೆಯರ ಸುರಕ್ಷತೆಯಂತಹ ಹಲವಾರು ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದರು. ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ ಮತ್ತು ರಾಜಸ್ಥಾನದಲ್ಲಿ ರೈತರ ಆತ್ಮಹತ್ಯೆಯಂತಹ ರಾಜ್ಯಕ್ಕೆ ನಿರ್ದಿಷ್ಟವಾದ ವಿಷಯಗಳನ್ನು ಅವರು ಎತ್ತಿದ್ದರು.

ಹಿಂದಿ ಭಾಷಿಕ ರಾಜ್ಯಗಳಲ್ಲಿ ರೈತರ ಸಾಲ ಮನ್ನಾದ ಅವರ ಭರವಸೆ ಗ್ರಾಮೀಣ ಜನರನ್ನು ಹೆಚ್ಚು ತಟ್ಟಿರುವಂತಿದೆ. ಸಚಿನ್ ಪೈಲಟ್,ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ ಪಾಲ್‌ರಂತಹ ಈ ರಾಜ್ಯಗಳ ಹಲವಾರು ಕಾಂಗ್ರೆಸ್ ನಾಯಕರು ಪಕ್ಷದ ಉತ್ತಮ ಸಾಧನೆಯ ಹೆಗ್ಗಳಿಕೆಯನ್ನು ರಾಹುಲ್ ಅವರ ಹುರುಪಿನ ಪ್ರಚಾರಕ್ಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News