74,542 ಮತಗಳ ಅಂತರದಿಂದ ಗೆಲುವು ಸಾಧಿಸಿದ ಅತ್ಯಂತ ಹಿರಿಯ ಶಾಸಕ

Update: 2018-12-11 17:50 GMT

ಜೈಪುರ,ಡಿ.11: ರಾಜಸ್ಥಾನ ವಿಧಾನಸಭಾ ಸ್ಪೀಕರ್, ಬಿಜೆಪಿ ಅಭ್ಯರ್ಥಿ 84ರ ಹರೆಯದ ಕೈಲಾಶ್ ಮೆಗ್ವಾಲ್ ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು 74,542 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಐದು ಬಾರಿ ಶಾಸಕರಾಗಿರುವ ಮೆಗ್ವಾಲ್ ಅವರು ಬಿಲ್ವಾರ್ ಕ್ಷೇತ್ರದ ಶಹಪುರದಿಂದ ಕಾಂಗ್ರೆಸ್‌ನ ಮಹವೀರ್ ಪ್ರಸಾದ್ ವಿರುದ್ಧ ಈ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಮೆಗ್ವಾಲ್ 1934ರ ಮಾರ್ಚ್ 22ರಂದು ಉದಯ್‌ಪುರ ಜಿಲ್ಲೆಯ ಮಜ್ವಾಡದಲ್ಲಿ ಜನಿಸಿದರು. ಎಂ.ಎ ಮತ್ತು ಎಲ್‌ ಎಲ್‌ ಬಿ ವ್ಯಾಸಂಗ ಮಾಡಿರುವ ಅವರು ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೂರು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವರಾಗಿರುವ ಮೆಗ್ವಾಲ್ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯದ ಶೈಕ್ಷಣಿಕ ಮತ್ತು ಆರ್ಥಿಕ ಸುಧಾರಣೆಗಾಗಿ ಹೋರಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News