ಮಧ್ಯಪ್ರದೇಶ: ಮತ ಗಳಿಕೆಯಲ್ಲಿ ನೋಟಾಕ್ಕೆ ಎಷ್ಟನೇ ಸ್ಥಾನ ಗೊತ್ತೇ?

Update: 2018-12-13 03:53 GMT

ಭೋಪಾಲ್, ಡಿ.13: ತೀವ್ರ ಹಣಾಹಣಿ ಕಂಡ ಮಧ್ಯಪ್ರದೇಶ ಚುನಾವಣಾ ಕಣದಲ್ಲಿ ಫೋಟೊ ಫಿನಿಶ್ ಫಲಿತಾಂಶ ಬಂದಿದ್ದು, ನೋಟಾ ಮತಗಳು ಗಣನೀಯ ಪ್ರಮಾಣದಲ್ಲಿ ಚಲಾವಣೆಯಾಗಿರುವುದು ಈ ಚುನಾವಣೆಯ ವಿಶೇಷ. ರಾಜ್ಯದಲ್ಲಿ ಐದನೇ ಅತಿಹೆಚ್ಚು ಮತ ಗಳಿಸಿದ ಬಣವಾಗಿ ನೋಟಾ ಮತದಾರರು ದಾಖಲೆಗೆ ಸೇರಿದ್ದಾರೆ.

ರಾಜ್ಯದ 22 ಕ್ಷೇತ್ರಗಳಲ್ಲಿ ಚಲಾವಣೆಯಾದ ನೋಟಾ ಮತಗಳ ಸಂಖ್ಯೆ, ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಅಧಿಕ. ಇದರಲ್ಲಿ ನಾಲ್ವರು ಬಿಜೆಪಿ ಸಚಿವರ ಕ್ಷೇತ್ರಗಳೂ ಸೇರಿವೆ. ಮತ ಗಳಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಅಂತರ ಕೇವಲ 0.1 ಶೇಕಡ ಆಗಿದ್ದು, ಶೇಕಡ 1.4ರಷ್ಟು ಮತದಾರರು ನೋಟಾ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಚಲಾಯಿತವಾದ ಒಟ್ಟು ನೋಟಾ ಮತಗಳ ಸಂಖ್ಯೆ 5.4 ಲಕ್ಷ.

ಚುನಾವಣೆಯಲ್ಲಿ ಬಿಜೆಪಿ ಶೇಕಡ 41, ಕಾಂಗ್ರೆಸ್ 40.9, ಬಿಎಸ್ಪಿ ಶೇಕಡ 5, ಗೊಂಡವನ ಗಣತಂತ್ರ ಪಾರ್ಟಿ ಶೇ.1.8 ಮತಗಳನ್ನು ಪಡೆದಿದು, ಐದನೇ ಸ್ಥಾನದಲ್ಲಿ ನೋಟಾ ಮತದಾರರಿದ್ದಾರೆ. ಸಮಾಜವಾದಿ ಪಕ್ಷ (1.3%) ಹಾಗೂ ಎಎಪಿ (ಶೇ.0.7%) ನೋಟಾಕ್ಕಿಂತ ಕಡಿಮೆ ಮತ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News