ಇಂಟರ್‌ಪೋಲ್‌ನಿಂದ ಮೆಹುಲ್ ಚೋಕ್ಸಿಗೆ ರೆಡ್ ಕಾರ್ನರ್ ನೋಟಿಸ್

Update: 2018-12-13 06:24 GMT

ಹೊಸದಿಲ್ಲಿ, ಡಿ.13: ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಗುರುವಾರ ತಲೆಮರೆಸಿಕೊಂಡಿರುವ ಭಾರತದ ಉದ್ಯಮಿ ಮೆಹುಲ್ ಚೋಕ್ಸಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.

ಭಾರತದಿಂದ ಪರಾರಿಯಾಗಿ ವೆಸ್ಟ್‌ಇಂಡೀಸ್‌ನ ಆ್ಯಂಟಿಗುವಾ ಹಾಗೂ ಬಾರ್ಬಡೋಸ್‌ನಲ್ಲಿ ನೆಲೆಸಿರುವ ಉದ್ಯಮಿ ಚೋಕ್ಸಿಗೆ ಸಿಬಿಐ ಕೋರಿಕೆ ಮೇರೆಗೆ ಇಂಟರ್‌ಪೋಲ್ ಗುರುವಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಮೆಹುಲ್ ಚೋಕ್ಸಿ ಹಾಗೂ ಅವರ ಅಳಿಯ, ಡೈಮಂಡ್ ವ್ಯಾಪಾರಿ ನೀರವ್ ಮೋದಿ ಭಾರತದ ಎರಡನೇ ಅತಿದೊಡ್ಡ ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹೆಸರಿನಲ್ಲಿರುವ ನಕಲಿ ಗ್ಯಾರಂಟಿಗಳನ್ನು ನೀಡಿ ವಿದೇಶಗಳ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ಸಾಲ ಪಡೆದಿದ್ದರು. ಈ ಬಗ್ಗೆ ಹಲವು ತನಿಖಾ ಏಜೆನ್ಸಿಗಳು ತನಿಖೆಯಲ್ಲಿ ನಿರತವಾಗಿವೆ. ಈ ಇಬ್ಬರು ಸಾಲಗಾರರು ಜನವರಿಯಲ್ಲಿ ಭಾರತದಿಂದ ಕಾಲ್ಕಿತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News