ಬಹುಭಾಷಾ ನಟಿ ಹನ್ಸಿಕಾ ವಿರುದ್ಧ ಪ್ರಕರಣ ದಾಖಲು

Update: 2018-12-15 08:57 GMT

ಚೆನ್ನೈ, ಡಿ.15: ನಟಿ ಹನ್ಸಿಕಾ ಮೋಟ್ವಾನಿ ಅವರ ಅಭಿನಯದ 50ನೇ ಚಿತ್ರ `ಮಹಾ'ದ ಪೋಸ್ಟರ್ ವಿವಾದಕ್ಕೀಡಾಗಿದೆ. ಆ್ಯಕ್ಷನ್ ಥ್ರಿಲ್ಲರ್ ಎಂದು ಹೇಳಲಾಗಿರುವ ಈ ಚಿತ್ರವನ್ನು ಯು.ಆರ್. ಜಮೀಲ್ ನಿರ್ದೇಶಿಸುತ್ತಿದ್ದು, ಕಳೆದ ವಾರ ಬಿಡುಗಡೆಯಾದ ಎರಡು ಪೋಸ್ಟರ್‍ಗಳ ಪೈಕಿ ಒಂದರಲ್ಲಿ ನಟಿ ಸಾಧುಗಳ ನಡುವೆ ಸಿಂಹಾಸನದಲ್ಲಿ  ಕುಳಿತುಕೊಂಡು ತಂಬಾಕು ಸೇದುತ್ತಿರುವುದನ್ನು ತೋರಿಸಲಾಗಿದೆ. ಇದು ವಿವಾದಕ್ಕೀಡಾಗಿ ಆಕೆ ಹಾಗೂ ನಿರ್ದೇಶಕ ಜಮೀಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪಟ್ಟಳಿ ಮಕ್ಕಳ್ ಕಚ್ಚಿ ಸಂಘಟನೆಯ ಜಾನಕಿರಾಮನ್ ಅವರು ನ್ಯಾಯಾಲಯದಲ್ಲಿ ದೂರು ದಾಖಲಿಸಿ ಈ ಪೋಸ್ಟರ್ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವುದರಿಂದ ಹನ್ಸಿಕಾ ಹಾಗೂ ಜಮೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆದರೆ ವಿವಾದದ ಬಗ್ಗೆ ಇಬ್ಬರೂ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ಈ ವರ್ಷ ಹನ್ಸಿಕಾ ಅಭಿನಯದ ಒಂದು ಚಿತ್ರ ಮಾತ್ರ ಬಿಡುಗಡೆಗೊಂಡಿದ್ದು, ಪ್ರಭುದೇವಾ ಜತೆಗಿನ `ಗುಲೇಭಾಗಾವಲಿ' ಬಾಕ್ಸಾಫೀಸಿನಲ್ಲಿ ಸಾಧಾರಣವಾಗಿ ನಿರ್ವಹಿಸಿದೆ. ಸದ್ಯ ಆಕೆಯ ಕೈಯ್ಯಲ್ಲಿ ಮೂರು ಚಿತ್ರಗಳಿದ್ದು ಮಹಾ ತನ್ನ 50ನೇ ಚಿತ್ರವೆಂದು ಹನ್ಸಿಕಾ ಇತ್ತೀಚೆಗೆ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News