ತೂತುಕುಡಿ ಸ್ಟರ್ಲೈಟ್ ಘಟಕಕ್ಕೆ ಅನುಮತಿ ನೀಡಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ

Update: 2018-12-15 16:22 GMT

ವೇದಾಂತ, ಡಿ. 15: ಖಾಯಂ ಮುಚ್ಚುವಂತೆ ರಾಜ್ಯ ಸರಕಾರ ನೀಡಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಶನಿವಾರ ತಳ್ಳಿ ಹಾಕಿರುವುದರಿಂದ ತಮಿಳುನಾಡು ತೂತುಕುಡಿಯಲ್ಲಿರುವ ವೇದಾಂತ ಸ್ಟರ್ಲೈಟ್ ತಾಮ್ರ ಘಟಕ ಶೀಘ್ರದಲ್ಲಿ ಮರು ಆರಂಭವಾಗಲಿದೆ.

ಸ್ಟರ್ಲೈಟ್ ತಾಮ್ರ ಘಟಕಕ್ಕೆ ಅನುಮತಿ ನವೀಕರಿಸಿ ಮೂರು ವಾರಗಳ ಒಳಗೆ ಹೊಸ ಆದೇಶ ನೀಡುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶಿಸಿದೆ. ಘಟಕ ಇರುವ ಪ್ರದೇಶದಲ್ಲಿರುವ ಜನರ ಕಲ್ಯಾಣಕ್ಕಾಗಿ ಮೂರು ವರ್ಷಗಳ ಅವಧಿಯಲ್ಲಿ 1 ಶತಕೋಟಿ ರೂಪಾಯಿ ವೆಚ್ಚ ಮಾಡುವಂತೆ ಕಂಪೆನಿಗೆ ಎನ್‌ಜಿಟಿ ನಿರ್ದೇಶಿಸಿದೆ. ಮಾಲಿನ್ಯದ ಕಾರಣಕ್ಕೆ ಘಟಕ ಮುಚ್ಚವಂತೆ ತಮಿಳುನಾಡು ಸರಕಾರ ಆದೇಶ ನೀಡಿದ ತಿಂಗಳ ಬಳಿಕ ಎನ್‌ಜಿಟಿ ಈ ಆದೇಶ ನೀಡಿದೆ.

ಈ ತಾಮ್ರ ಘಟಕ ಮುಚ್ಚುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಕನಿಷ್ಠ 13 ಮಂದಿ ರೈತರು ಮೃತಪಟ್ಟಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News