ಅಪ್ರಾಪ್ತೆಯ ಅತ್ಯಾಚಾರ: ಅಮಾನತುಗೊಂಡ ಶಾಸಕ ದೋಷಿ

Update: 2018-12-15 16:33 GMT

ಪಾಟ್ನ,ಡಿ.15: 2016ರ ಫೆಬ್ರವರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನ ನ್ಯಾಯಾಲಯ ರಾಷ್ಟ್ರೀಯ ಜನತಾದಳದ ನವಾಡದ ಶಾಸಕ ರಾಜಬಲ್ಲಬ ಯಾದವ್ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಡಿಸೆಂಬರ್ 21ರಂದು ಘೋಷಿಸುವುದಾಗಿ ತಿಳಿಸಿದೆ.

ಎಂಪಿ-ಎಂಎಲ್‌ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಪರಶುರಾಮ ಯಾದವ್, ನಲಂದಾದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ರಾಜಬಲ್ಲಬ ಮತ್ತು ಇತರ ಐವರನ್ನು ದೋಷಿ ಎಂದು ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News