ಪೆಥಾಯಿ ಚಂಡಮಾರುತದಿಂದ ಚೆನ್ನೈ ಪಾರಾಗುವ ಸಾಧ್ಯತೆ

Update: 2018-12-15 16:55 GMT

ಚೆನ್ನೈ,ಡಿ.15: ಸಂಭಾವ್ಯ ಪೆಥಾಯಿ ಚಂಡಮಾರುತದಿಂದ ಚೆನ್ನೈ ಪಾರಾಗುವ ಲಕ್ಷಣಗಳು ಕಂಡು ಬಂದಿದ್ದು,ವಾರಾಂತ್ಯದಲ್ಲಿ ಈ ಹಿಂದೆ ಅಂದಾಜಿಸಿದ್ದ ಭಾರೀ ಮಳೆಯ ಬದಲಾಗಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ಚಂಡಮಾರುತವು ತಮಿಳುನಾಡು ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಕ್ಷೀಣಗೊಂಡಿದ್ದು,ಸೋಮವಾರ ಮಧ್ಯಾಹ್ನ ಆಂಧ್ರಪ್ರದೇಶದ ಒಂಗೋಲ್ ಮತ್ತು ಕಾಕಿನಾಡಾ ನಡುವೆ ಕರಾವಳಿಯನ್ನಪ್ಪಳಿಸಲಿದೆ ಎಂದು ಅದು ಹೇಳಿದೆ.

ಚಂಡಮಾರುತವು ಉತ್ತರಕ್ಕೆ ಸಾಗುವ ಮುನ್ನ ಚೆನ್ನೈಗೆ ಸಮೀಪದಿಂದ ಹಾದು ಹೋಗಲಿದ್ದು, ತಮಿಳುನಾಡಿನ ಉತ್ತರ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಬಹುದು. ಆದರೆ ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ. ರವಿವಾರ ಮಧ್ಯಾಹ್ನ ಚೆನ್ನೈನಲ್ಲಿ ಸಾಧಾರಣ ಮಳೆಯಾಗಬಹುದು ಮತ್ತು ಸೋಮವಾರ ಸ್ವಲ್ಪ ಹೆಚ್ಚು ಮಳೆ ಸುರಿಯಬಹುದು ಎಂದು ಇಲಾಖೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News