‘ಕಾಂಗ್ರೆಸ್ ವಿಧವೆ’ ಹೇಳಿಕೆ: ಮೋದಿ ವಿರುದ್ಧ ಪ್ರತಿಭಟನೆಗೆ ರಾಯ್ ಬರೇಲಿ ಸಜ್ಜು

Update: 2018-12-16 04:37 GMT

ಹೊಸದಿಲ್ಲಿ,ಡಿ.15: ‘ಕಾಂಗ್ರೆಸ್ ವಿಧವೆ’ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ಹೇಳಿಕೆ ನೀಡಿರುವ ಕಾರಣ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ರವಿವಾರ ರಾಯಬರೇಲಿಗೆ ಮೊದಲ ಬಾರಿಗೆ ಭೇಟಿ ನೀಡಲಿರುವ ಮೋದಿಯವರ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಇತ್ತೀಚಿಗೆ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ವಿಧವಾ ಪಿಂಚಣಿ ಯೋಜನೆ ಸೇರಿದಂತೆ ಕಾಂಗ್ರೆಸ್ ಸರಕಾರವು ಹಲವಾರು ಹಗರಣಗಳನ್ನು ನಡೆಸಿದೆ ಎಂದು ಮೋದಿ ಆರೋಪಿಸಿದ್ದರಲ್ಲದೆ,ಯಾವ ಕಾಂಗ್ರೆಸ್ ವಿಧವೆಯ ಖಾತೆಗೆ ಹಣ ಜಮಾ ಆಗುತ್ತಿತ್ತು ಎಂದು ಪ್ರಶ್ನಿಸಿದ್ದರು. ಅವರ ಈ ಟೀಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಮೋದಿಯವರ ಅವಮಾನಕಾರಿ ಹೇಳಿಕೆಯನ್ನು ವಿರೋಧಿಸಿ ರವಿವಾರ ಅವರು ನೂತನವಾಗಿ ತಯಾರಿಸಲಾಗಿರುವ ರೇಲ್ವೆ ಬೋಗಿಗಳಿಗೆ ಚಾಲನೆ ನೀಡಲಿರುವ ರಾಯಬರೇಲಿಯ ರೇಲ್ ಕೋಚ್ ಫ್ಯಾಕ್ಟರಿಯ ಎದುರು ಕಪ್ಪುಬಾವುಟಗಳ ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಯಬರೇಲಿ ಶಾಸಕಿ ಹಾಗೂ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅದಿತಿ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News