ಮಹತ್ವದ ಹುದ್ದೆಗೆ ಅಳಿಯನ ನೇಮಕ: ರೂಹಾನಿ ವಿರುದ್ಧ ಸ್ವಜನಪಕ್ಷಪಾತದ ಆರೋಪ

Update: 2018-12-16 17:01 GMT

ಟೆಹರಾನ್,ಡಿ.15: ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರ ಅಳಿಯನನ್ನು, ಇರಾನ್‌ನ ಭೌಗೋಳಿಕ ಸಮೀಕ್ಷೆಯ ವರಿಷ್ಠರನ್ನಾಗಿ ನೇಮಕಗೊಳಿಸಿರುವುದು ವಿವಾದದ ಕಿಡಿಯನ್ನು ಭುಗಿಲೆಬ್ಬಿಸಿದೆ. ಇರಾನ್ ಅಧ್ಯಕ್ಷರು ಸ್ವಜನಪಕ್ಷಪಾತದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸರಕಾರದ ಉನ್ನತ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.

 ಮೂವತ್ತು ವರ್ಷ ವಯಸ್ಸಿನ ಕಾಂಬಿಝ್ ಮೆಹದಿಝಾದೆಹ್ ಅವರು ಅಧ್ಯಕ್ಷ ರೂಹಾನಿ ಅವರ ಪುತ್ರಿಯನ್ನು ಕಳೆದ ಆಗಸ್ಟ್‌ನಲ್ಲಿ ಸರಳ ವಿವಾಹವಾಗಿದ್ದರು. ಇದೀಗ ಅವರನ್ನು ದೇಶದ ಭೌಗೋಳಿಕ ಸಮೀಕ್ಷೆಯ ವರಿಷ್ಠರನ್ನಾಗಿ ನೇಮಕಗೊಳಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.

 ಪೆಟ್ರೋಲಿಯಂ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಮೆಹದಿಝಾದೆಹ್ ಅವರನ್ನು ಇರಾನ್‌ನ ತೈಲ ಸಚಿವಾಲಯ, ಟೆಕ್ವಾಂಡೊ ಒಕ್ಕೂಟ ಹಾಗೂ ರಾಷ್ಟ್ರೀಯ ಯುವಸಂಸ್ಥೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆಂದು ತಾಸ್ನಿಮ್ ವರದಿ ಮಾಡಿದೆ. ಇರಾನ್‌ನ ಭೂ ಸರ್ವೇಕ್ಷಣಾ ಸಂಸ್ಥೆಯ ವರಿಷ್ಠರಾಗಿ ಮೆಹದಿಝಾದೆಹ್ ಅವರ ನೇಮಕದ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News